alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದಂಪತಿ ಮನೆಯ ಫ್ರಿಡ್ಜ್ ನಲ್ಲಿತ್ತು ಮಾನವ ದೇಹದ ತುಂಡುಗಳು

ಮೆಕ್ಸಿಕೋ: ಸುಮಾರು 20 ಮಹಿಳೆಯರು ಹತ್ಯೆ ಮಾಡಿದ್ದ ಮೆಕ್ಸಿಕನ್ ದಂಪತಿಯನ್ನು ಅಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಕೊಲೆ ಬಳಿಕ ದೇಹವನ್ನು ತುಂಡರಿಸಿ ಅದನ್ನು ಬೇಬಿ ಸ್ಟ್ರೋಲರ್ ನಲ್ಲಿ ಕೊಂಡೊಯ್ಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ಮೂವರು ಮಹಿಳೆಯರು ಹಾಗೂ 2 ತಿಂಗಳ ಶಿಶು ಕಾಣೆಯಾದ ಬಗ್ಗೆ ತನಿಖೆ ನಡೆಸುವ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಜುವಾನ್ ಕ್ಯಾರ್ಲೋಸ್ ಮತ್ತು ಆತನ ಪ್ಯಾಟ್ರಿಸ್ ಎಂಬುವರೇ ಈ ಕೃತ್ಯ ಎಸಗಿದವರಾಗಿದ್ದಾರೆ. ತಾನು ಮಾಡಿದ್ದ 10 ಮಂದಿಯ ಹತ್ಯೆಯ ಸಂಪೂರ್ಣ ಮಾಹಿತಿಯನ್ನು ತನಿಖೆ ವೇಳೆ ಜುವಾನ್ ಬಾಯಿಬಿಟ್ಟಿದ್ದಾನೆ. ಅಲ್ಲದೆ, ಪತ್ನಿ ಜತೆ ಸೇರಿ ಮತ್ತೂ 10 ಮಂದಿಯ ಹತ್ಯೆಗೈದಿದ್ದಾಗಿಯೂ ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ.

ಆರೋಪಿಗಳ ಮನೆಯಲ್ಲಿ ಪೊಲೀಸರು ಪರಿಶೀಲಿಸಿದಾಗ ಸುಮಾರು 8 ಬಕೆಟ್ ನಲ್ಲಿ ತುಂಡರಿಸಿದ ದೇಹದ ಭಾಗಗಳು ಪತ್ತೆಯಾಗಿವೆ. ಇನ್ನು ಕೆಲವು ಭಾಗಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ರೆಫ್ರಿಜಿರೇಟರ್ ನಲ್ಲಿ ತುಂಬಿಟ್ಟಿದ್ದು ಪತ್ತೆಯಾಗಿದೆ. ಇವರು ಸೈಕೋಗಳೇ ಅಥವಾ ಸರಣಿ ಹಂತಕರೇ ಎಂಬ ತನಿಖೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...