alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕ ಪ್ರದೇಶದಲ್ಲಿ ಸಂಬಂಧ ಬೆಳೆಸಲು ಸಿಕ್ತು ಕಾನೂನಿನ ಒಪ್ಪಿಗೆ…!

ಸಾರ್ವಜನಿಕ ಪ್ರದೇಶಗಳಲ್ಲಿ ಸಂಗಾತಿಯನ್ನು ಅಪ್ಪಿ-ಮುದ್ದಾಡುವುದನ್ನು ಅನೇಕ ದೇಶಗಳು ವಿರೋಧಿಸುತ್ತದೆ. ಅಂಥಹ ಸಂಗಾತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತವೆ. ಆದ್ರೆ ಮೆಕ್ಸಿಕೋ ತನ್ನ ಒಂದು ಪ್ರದೇಶದಲ್ಲಿ ಸಾರ್ವಜನಿಕ  ಸೆಕ್ಸ್ ಗೆ ಒಪ್ಪಿಗೆ ನೀಡಿದೆ. ಕಾನೂನಿನ ಮಾನ್ಯತೆ ಸಿಕ್ಕ ಮೇಲೆ ಗ್ವಾದಲಜಾರ್ ಪ್ರದೇಶದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಜೋಡಿಗಳು ಒಂದಾಗಬಹುದಾಗಿದೆ.

ಗ್ವಾದಲಜಾರ್ ಸಂಪ್ರದಾಯವಾದಿಗಳ ನಗರವಾಗಿದೆ. ಅಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರೀತಿ ವ್ಯಕ್ತಪಡಿಸುತ್ತಿದ್ದ ಜೋಡಿಗಳನ್ನು ಪೊಲೀಸರು ಹಿಡಿದು ವಿಚಾರಣೆ ನಡೆಸುತ್ತಿದ್ದರು. ಪೊಲೀಸ್ ಈ ಕ್ರಮ ಅಲ್ಲಿನವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ಕೋರ್ಟ್ ಮೆಟ್ಟಿಲೇರಿತ್ತು.  “ಶಾರೀರಿಕ ಸಂಬಂಧ ಬೆಳೆಸಿದ ಜೋಡಿಯಿಂದ ತೊಂದರೆಯಾಗಿದೆ ಎನ್ನುವ ಬಗ್ಗೆ ನಾಗರಿಕರು ದೂರು ನೀಡದೆ ಹೋದಲ್ಲಿ ಅದು ಅಪರಾಧವಲ್ಲವೆಂದು”  ಕಾನೂನು ತಿದ್ದುಪಡಿ ಮಾಡಲಾಗಿದೆ.

ಸ್ಥಳೀಯ ಸಂಸ್ಥೆಯೊಂದು ವಿದ್ಯಾರ್ಥಿಗಳ ಸಮೀಕ್ಷೆ ನಡೆಸಿತ್ತು. ಶೇಕಡಾ 90 ರಷ್ಟು ವಿದ್ಯಾರ್ಥಿಗಳು ಪೊಲೀಸ್ ಕ್ರಮವನ್ನು ವಿರೋಧಿಸಿದ್ದರು. ಅನೈತಿಕ ಕಾರ್ಯ ಚಟುವಟಿಕೆ ಹೆಸರಿನಲ್ಲಿ ಬಂಧಿಸಲಾಗ್ತಿದೆ ಎಂದು ದೂರಿದ್ದರು. ಗ್ವಾದಲಜಾರ್ ನಲ್ಲಿ 15 ಲಕ್ಷ ಮಂದಿ ವಾಸವಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...