alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನಾಕೆಯ ಹುಡುಕಲು ನೂರಾರು ಇಮೇಲ್ ಮಾಡಿದ ಭೂಪ

ಹಿಂದಿನ ದಿನ ಬಾರ್ ಒಂದರಲ್ಲಿ ಸಿಕ್ಕಿದ್ದ ಹುಡುಗಿ, ಅರ್ಧ ಹೆಸರು ಹಾಗೂ ತಪ್ಪು ಫೋನ್ ನಂಬರ್ ನ್ನು ಇಟ್ಟುಕೊಂಡೇ ಅವಳನ್ನು ಹುಡುಕಬೇಕೆಂದು ಸುಮಾರು 246 ಹುಡುಗಿಯರಿಗೆ ಕೆನಡಾದ ಭೂಪನೊಬ್ಬ ಮೆಸೇಜ್ ಮಾಡಿದ್ದಾನೆ.

ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಇದೇ ವಿವಿಯ ವಿದ್ಯಾರ್ಥಿಯೊಬ್ಬ ನಿಕೋಲ್ ಎಂಬ ಹೆಸರಿನ ವಿದ್ಯಾರ್ಥಿನಿಯನ್ನು ವಿವಿ ಪಕ್ಕದಲ್ಲಿರುವ ಬಾರ್ ವೊಂದರಲ್ಲಿ ಭೇಟಿಯಾಗಿ, ಪರಿಚಯವಾಗಿದೆ.

ಆದರೆ ಬಾರ್ ನಿಂದ ತೆರಳುವಾಗ, ಹುಡುಗಿ ತಪ್ಪು ಫೋನ್ ನಂಬರ್ ನೀಡಿದ್ದಾಳೆ. ಅವಳನ್ನು ಹುಡುಕಲೇಬೇಕೆಂದು ನಿರ್ಧರಿಸಿದ ವಿದ್ಯಾರ್ಥಿ, ವಿವಿಯಲ್ಲಿರುವ ನಿಕೋಲ್ ಎಂಬ ಹೆಸರಿನ ಎಲ್ಲ ಹುಡುಗಿಯರಿಗೆ, “ನಾನು ನಿಮ್ಮನ್ನು ನಿನ್ನೇ ಬಾರ್ ನಲ್ಲಿ ಭೇಟಿಯಾಗಿದ್ದೆ. ಆದರೆ ನೀವು ತಪ್ಪು ನಂಬರ್ ನೀಡಿದ್ದೀರಿ’ ಎಂದು ಇಮೇಲ್ ಮಾಡಿದ್ದಾನೆ.

ಈ ಸಾಲು ಸಾಲು ಇಮೇಲ್, ವಿವಿಯಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿದ್ದು, ಇಮೇಲ್ ಸ್ವೀಕರಿಸಿದ ವಿದ್ಯಾರ್ಥಿಗಳೆಲ್ಲ ಸೇರಿ “ನಿಕೋಲ್ ಫ್ರಂ ಲಾಸ್ಟ್ ನೈಟ್’ ಎಂಬ ಫೇಸ್ ಬುಕ್ ಪೇಜ್ ಮಾಡಿ, ವಿದ್ಯಾರ್ಥಿ ಹುಡುಕುತ್ತಿದ್ದ ವಿದ್ಯಾರ್ಥಿನಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ನಡೆದ ಈ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದ ಕನಸಿನ ನಿಕೋಲ್, ವಿದ್ಯಾರ್ಥಿಯನ್ನು ಸಂಪರ್ಕಿಸಿದ್ದು, ಕೆಲವೇ ದಿನದಲ್ಲಿ ಇಬ್ಬರು ಡೇಟಿಂಗ್ ಹೋಗಲಿದ್ದಾರೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...