alex Certify
ಕನ್ನಡ ದುನಿಯಾ       Mobile App
       

Kannada Duniya

18 ವರ್ಷಗಳ ಬಳಿಕ ಸಿಕ್ಕಿತು ಆಕೆ ಕಳುಹಿಸಿದ್ದ ಸಂದೇಶ

ಮಹಿಳೆಯೊಬ್ಬಳು 18 ವರ್ಷಗಳ ಹಿಂದೆ ಸಂದೇಶವೊಂದನ್ನು ಬರೆದು ಅದನ್ನು ಬಾಟಲಿಯಲ್ಲಿ ಹಾಕಿ ಸಮುದ್ರಕ್ಕೆ ಎಸೆದಿದ್ದು, ಅದು ಈಗ ವ್ಯಕ್ತಿಯೊಬ್ಬನಿಗೆ ಸಿಕ್ಕಿದೆ.

ರೀಟಾ ಗನೀನ್ ಎಂಬ ಈ ಅಮೆರಿಕನ್ ಮಹಿಳೆ, 2000 ರ ಆಗಸ್ಟ್ ನಲ್ಲಿ ಮೆಸಾಚುಸೆಟ್ಸ್ ನಗರಕ್ಕೆ ಭೇಟಿ ನೀಡಿದ್ದು, ಅಲ್ಲಿನ ಕಡಲತೀರಕ್ಕೆ ಹೋದ ವೇಳೆ ಬಾಟಲಿ ಒಂದರಲ್ಲಿ, ತನ್ನ ವಿಳಾಸದೊಂದಿಗೆ ಇದನ್ನು ಸಿಕ್ಕಿದವರು ತನಗೆ ತಂದು ತಲುಪಿಸಿ ಎಂಬ ಸಂದೇಶ ಬರೆದು ಸಮುದ್ರಕ್ಕೆ ಎಸೆದಿದ್ದಳು.

ಇದಾದ ಬಳಿಕ ಆ ಘಟನೆಯನ್ನೇ ಮರೆತಿದ್ದ ರೀಟಾ ಗನೀನ್ ಗೆ ಇತ್ತೀಚೆಗೆ ಬಂದ ಕರೆಯೊಂದು ಅದನ್ನು ನೆನಪಿಸಿತ್ತು. 18 ವರ್ಷಗಳ ಹಿಂದೆ ಎಸೆದಿದ್ದ ಬಾಟಲಿ ನೋವಾ ಸ್ಕಾಟಿಯಾದಲ್ಲಿ ವ್ಯಕ್ತಿಯೊಬ್ಬನಿಗೆ ಸಿಕ್ಕಿತ್ತು, ಅದರಲ್ಲಿದ್ದ ಸಂದೇಶವನ್ನು ಓದಿದ ಆತ, ರೀಟಾರಿಗೆ ಕರೆ ಮಾಡಿದ್ದ. ಇದೀಗ ರೀಟಾ ಆ ವ್ಯಕ್ತಿಯನ್ನು ಭೇಟಿ ಮಾಡಲು ಉತ್ಸುಕತೆಯಿಂದ ಇದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...