alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಫುರದ್ರೂಪಿ ಪುರುಷನನ್ನು ನೋಡಿದ ಮಹಿಳೆ ಅಂದುಕೊಳ್ತಾಳೆ….

femaleಸೌಂದರ್ಯವಿರೋದು ಕಣ್ತುಂಬಿಕೊಳ್ಳೋದಕ್ಕೆ ಎನ್ನುವ ಮಾತೊಂದಿದೆ. ಕೇವಲ ಹುಡುಗ್ರು ಮಾತ್ರ ಹುಡುಗಿಯರ ಸೌಂದರ್ಯ ನೋಡ್ತಾರೆ ಅಂದುಕೊಳ್ಳೋದು ತಪ್ಪು. ಹುಡುಗಿಯರು ಕೂಡ ಚೆಂದದ ಹುಡುಗರ ಮೇಲೆ ಕಣ್ಣು ಹಾಕ್ತಾರೆ. ಸುಂದರ ಹುಡುಗರನ್ನು ನೋಡಿದ್ರೆ ಹುಡುಗಿ ಇರಲಿ ಮಹಿಳೆ ಇರಲಿ ತಮ್ಮದೆ ರೀತಿಯಲ್ಲಿ ಯೋಚನೆ ಮಾಡ್ತಾರೆ. ಆದ್ರೆ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಸಾಹಸಕ್ಕೆ ಹೋಗುವುದಿಲ್ಲ.

ಸ್ಫುರದ್ರೂಪಿ ಹುಡುಗನನ್ನು ನೋಡಿದ ಹುಡುಗಿ, ಈತ ನನ್ನ ಬಾಯ್ ಫ್ರೆಂಡ್ ಆಗಿದ್ರೆ ಎಂದು ಕನಸು ಕಾಣ್ತಾಳೆ. ಆತನಿಗೆ ಮದುವೆಯಾಗಿದೆ ಎಂಬ  ವಿಚಾರ ಗೊತ್ತಾದ್ರೆ ಇವನ ಕಂಪನಿಯಾದ್ರೂ ಸಿಕ್ಕಿದ್ರೆ ಎಂದು ಯೋಚನೆ ಮಾಡ್ತಾಳೆ. ಮಹಿಳೆಗೆ ಈಗಾಗಲೇ ಮದುವೆಯಾಗಿದ್ದರೆ ಆಕೆ ಯೋಚನೆ ಮಾಡೋದು ಬೇರೆ ರೀತಿಯಲ್ಲಿ. ನನ್ನ ಗಂಡ ಕೂಡ ಹೀಗೆ ಇದ್ದಿದ್ದರೆ ಎಂದುಕೊಳ್ತಾಳೆ ಮಹಿಳೆ.

ನಾನು ಸಿಂಗಲ್ ಆಗಿದ್ದರೆ ಈತನನ್ನೇ ಬಾಯ್ ಫ್ರೆಂಡ್ ಮಾಡಿಕೊಳ್ತಾ ಇದ್ದೆ ಎಂದುಕೊಳ್ತಾರೆ ಕೆಲ ಮಹಿಳೆಯರು. ಅನೇಕ ವರ್ಷಗಳಿಂದ ಕಮಿಟೆಡ್ ಆಗಿರುವ ಮಹಿಳೆ ಇರಲಿ, ಸುಂದರ ಹುಡುಗನನ್ನು ನೋಡಿದ ತಕ್ಷಣ ಆಕೆಯ ಮನದಲ್ಲೊಂದು ಯೋಚನೆ ಹಾದು ಹೋಗುವುದು ಖಂಡಿತ. ಸ್ನೇಹ ಬೆಳೆಸುವುದರಲ್ಲೇನು ತಪ್ಪು. ಒಮ್ಮೆ ನಗಬಹುದಲ್ಲ, ಸುತ್ತಾಡಿಕೊಂಡು ಬರಬಹುದಲ್ಲ ಎಂದುಕೊಳ್ಳುತ್ತಾಳೆ ಮಹಿಳೆ. ಕೆಲವೊಬ್ಬರು ಇದೇ ವಿಚಾರಕ್ಕೆ ದುಃಖಪಡ್ತಾರೆ. ಮೊದಲೇ ಯಾಕೆ ಈತ ನನಗೆ ಸಿಗಲಿಲ್ಲ. ನಾನು ತಪ್ಪು ಮಾಡಿದೆ ಎಂದು ನೊಂದುಕೊಳ್ಳುವ ಮಹಿಳೆಯರ ಸಂಖ್ಯೆಯೂ ಕಡಿಮೆಯೇನಿಲ್ಲ. ಅಂದ ಹಾಗೇ ವಿದೇಶದಲ್ಲಿ ಈ ಕುರಿತು ಅಧ್ಯಯನ ನಡೆದಿದ್ದು, ಭಾರತದಲ್ಲಿ ಇನ್ನೂ ಅಂತಹ ಪರಿಸ್ಥಿತಿ ಇಲ್ಲವೆನ್ನಬಹುದೇನೋ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...