alex Certify
ಕನ್ನಡ ದುನಿಯಾ       Mobile App
       

Kannada Duniya

ಹಸಿದ ನಾಯಿಗೆ ಬೆಕ್ಕನ್ನೇ ತಿನ್ನಿಸಿದ ಕ್ರೂರಿಗಳಿಗೆ ವಿಚಿತ್ರ ಶಿಕ್ಷೆ..!

dogs-eating-cat_650x400_61489604088

ಹಸಿದ ನಾಯಿಗೆ ಬೆಕ್ಕನ್ನು ಆಹಾರವಾಗಿ ಕೊಟ್ಟು, ಅದನ್ನು ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡಿದ ಮೂವರು ಈಗ ಪೀಕಲಾಟ ಅನುಭವಿಸ್ತಿದ್ದಾರೆ. 90 ದಿನಗಳ ಕಾಲ ದುಬೈ ಮೃಗಾಲಯ ಸ್ವಚ್ಛಗೊಳಿಸುವಂತೆ ಇವರಿಗೆ ಶಿಕ್ಷೆ ವಿಧಿಸಲಾಗಿದೆ.

ಬಂಧಿತ ಮೂವರು ಆರೋಪಿಗಳಿಗೂ ಯುಎಇ ಪ್ರಧಾನಿ ಶೇಕ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಈ ಶಿಕ್ಷೆ ವಿಧಿಸಿದ್ದಾರೆ. ಪ್ರಾಣಿ ಹಿಂಸೆ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿರೋದ್ರಿಂದ ಈ ಶಿಕ್ಷೆ ನೀಡಲಾಗಿದೆಯಂತೆ. ಮೂವರು ಆರೋಪಿಗಳು ಪ್ರತಿನಿತ್ಯ ನಾಲ್ಕು ಗಂಟೆಗಳ ಕಾಲ ದುಬೈ ಮೃಗಾಲಯವನ್ನು ಸ್ವಚ್ಛ ಮಾಡಬೇಕು.

ಈ ಶಿಕ್ಷೆ ವಿಭಿನ್ನವಾಗಿದ್ದು, ಪ್ರಾಣಿ ಹಿಂಸೆ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸಲಿದೆ ಅಂತಾ ದುಬೈ ಪೊಲೀಸ್ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ದುಬೈ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಹಾಗೂ ವ್ಹೀಲಿಂಗ್ ಮಾಡಿದ್ದ ಯುವಕನೊಬ್ಬನಿಗೆ ಕೂಡ ಪ್ರಧಾನಿ ವಿಚಿತ್ರ ಶಿಕ್ಷೆ ವಿಧಿಸಿದ್ದರು. ಒಂದು ತಿಂಗಳುಗಳ  ಕಾಲ ಪ್ರತಿನಿತ್ಯ 4 ಗಂಟೆ ದುಬೈ ರಸ್ತೆಗಳನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...