alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗ್ರಾಮದಲ್ಲಿ ಮಹಿಳೆಯರ ಬಟ್ಟೆ ಧರಿಸ್ತಾರೆ ಪುರುಷರು

ಮಹಿಳೆಯರ ಬಟ್ಟೆಯನ್ನು ಪುರುಷರು ಧರಿಸಿದ್ದನ್ನು ನೀವು ನೋಡಿದ್ದೀರಾ? ಮಂಗಳ ಮುಖಿಯರನ್ನು ಬಿಟ್ಟರೆ ಮತ್ತ್ಯಾವ ಪುರುಷರೂ ಮಹಿಳೆಯರ ಬಟ್ಟೆ ಧರಿಸೋದಿಲ್ಲ. ಆದ್ರೆ ಥೈಲ್ಯಾಂಡ್ ನಲ್ಲಿ ನಖೋನ್ ಫೆನೋಮ್ ಪ್ರಾಂತ್ಯದಲ್ಲಿರುವ ಹಳ್ಳಿಯ ಪುರುಷರು ಹುಡುಗಿಯರ ಬಟ್ಟೆ ಧರಿಸುತ್ತಾರೆ.

ಮಾಹಿತಿ ಪ್ರಕಾರ ಆ ಹಳ್ಳಿಯ ಜನರು ವಿಧವೆಯ ಭೂತಕ್ಕೆ ಭಯಗೊಂಡಿದ್ದಾರಂತೆ. ಇದಕ್ಕಾಗಿ ಪುರುಷರು ಮಹಿಳೆಯರ ಬಟ್ಟೆ ಧರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮಲಗಿದ್ದ 5 ಮಂದಿ ಸಾವನ್ನಪ್ಪಿದ್ದರು. ಅವ್ರ ಸಾವಿಗೆ ವಿಧವೆಯ ಭೂತ ಕಾರಣ ಎಂದು ಗ್ರಾಮಸ್ಥರು ನಂಬಿದ್ದಾರೆ.

ಗ್ರಾಮದ ಪುರುಷರು ಹಾಗೂ ಯುವಕರನ್ನು ಈ ಭೂತ ಕೊಲೆ ಮಾಡ್ತಿದೆಯಂತೆ. ಹಾಗಾಗಿ ಮಕ್ಕಳು, ಪತಿಯನ್ನು ರಕ್ಷಿಸಲು ಗ್ರಾಮದ ಮಹಿಳೆಯರು ಅವ್ರಿಗೆ ಮಹಿಳೆ ಬಟ್ಟೆ ನೀಡ್ತಿದ್ದಾರೆ. ಗ್ರಾಮದಲ್ಲಿ ಪುರುಷರಿಲ್ಲ ಎಂದು ನಂಬುವ ಭೂತ ಊರಿನಿಂದ ಓಡಿ ಹೋಗುತ್ತದೆ ಎನ್ನುತ್ತಾರೆ ಮಹಿಳೆಯರು.

ಮನೆ ಮುಂದೆ ಗೊಂಬೆಯನ್ನು ಇಟ್ಟಿರುವ ಗ್ರಾಮಸ್ಥರು ಅದಕ್ಕೆ ಖಾಸಗಿ ಅಂಗ ಅಳವಡಿಸಿದ್ದಾರೆ. ಗೊಂಬೆ ಇಟ್ಟ ಮೇಲೆ ಗ್ರಾಮದಲ್ಲಿ ಯಾವುದೇ ಪುರುಷನ ಸಾವಾಗಿಲ್ಲವಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...