alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವಿಗೆ ಆಹಾರವಾಗ್ತಿದ್ದ ನಾಯಿ ರಕ್ಷಿಸಿ ಮಾನವೀಯತೆ ಮೆರೆದ ಯುವಕರು

ಇತ್ತೀಚಿನ ದಿನಗಳಲ್ಲಿ ಮನುಷ್ಯ, ಮನುಷ್ಯರನ್ನು ರಕ್ಷಿಸೋದೆ ಕಷ್ಟ. ಅಂಥಹದ್ರಲ್ಲಿ ಮನುಷ್ಯ ತನ್ನ ಪ್ರಾಣವನ್ನು ಒತ್ತೆಯಿಟ್ಟು ಪ್ರಾಣಿಯ ರಕ್ಷಣೆ ಮಾಡ್ತಾನೆ ಅಂದ್ರೆ ನಂಬೋದು ಕಷ್ಟ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಮೂವರು ಯುವಕರ ಮಾನವೀಯತೆಯ ಕಥೆ ಹೇಳುತ್ತದೆ.

ದೊಡ್ಡ ಹಾವಿನ ಬಾಯಿಗೆ ಹೋಗ್ತಿದ್ದ ನಾಯಿಯೊಂದನ್ನು ಮೂವರು ಯುವಕರು ರಕ್ಷಣೆ ಮಾಡಿದ್ದಾರೆ. ಈ ಸಾಹಸದ ದೃಶ್ಯವನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ನೀರಿನಲ್ಲಿ ವಿಷದ ಹಾವಿನ ಬಾಯಿಯಿಂದ ನಾಯಿ ರಕ್ಷಿಸಲು ವ್ಯಕ್ತಿಯೊಬ್ಬ ಪ್ರಯತ್ನ ಪಡ್ತಿದ್ದಾನೆ. ನಂತ್ರ ಇನ್ನಿಬ್ಬರು ಆತನಿಗೆ ನೆರವಾಗ್ತಾರೆ.

ಮೊದಲು ಹಾವನ್ನು ನೀರಿನಿಂದ ಹೊರ ತರ್ತಾರೆ. ಆ ನಂತ್ರ ಹಾವಿನ ಬಾಯಿಯಲ್ಲಿದ್ದ ನಾಯಿ ರಕ್ಷಣೆಗೆ ಮುಂದಾಗ್ತಾರೆ. ಕಷ್ಟಪಟ್ಟು ನಾಯಿಯನ್ನು ರಕ್ಷಿಸುವ ಯುವಕರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ನಾಯಿ ರಕ್ಷಣೆ ನಂತ್ರ ಹಾವೇನಾಯ್ತು ಎನ್ನುವುದು ಗೊತ್ತಿಲ್ಲ. ಕೆಲವರು ಹಾವನ್ನು ಸಾಯಿಸಿದ್ದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...