alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯ ವೇಷ ತೊಟ್ಟು ಹುಡುಗರ ಮೇಲೆ ದುಷ್ಕೃತ್ಯವೆಸಗುತ್ತಿದ್ದ

ಫ್ಲೋರಿಡಾದಲ್ಲಿ ಮಹಿಳೆ ಬಟ್ಟೆ ತೊಟ್ಟು 14 ವರ್ಷದ ಹುಡುಗನ ಮೇಲೆ ದುಷ್ಕೃವೆಸಗಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಫೋರ್ಟ್ ಲಾಡರ್ಡೆಲ್ ನಲ್ಲಿ ಹಿಂದಿನ ವರ್ಷ 36 ವರ್ಷದ ವ್ಯಕ್ತಿಯೊಬ್ಬ ಮಹಿಳೆ ವೇಷ ಧರಿಸಿ 14 ವರ್ಷದ ಹುಡುಗನ ಮೇಲೆ ಅತ್ಯಾಚಾರವೆಗಿದ್ದ. ಜೆವರಿಸ್ ಕ್ವಿಂಟನ್ ಫಿಲಿಪ್ಸ್ ಜೊತೆ ಆತನ ಸ್ನೇಹಿತ ಕೂಡ ಸ್ಥಳದಲ್ಲಿದ್ದು, ಅತ್ಯಾಚಾರಕ್ಕೆ ಬೆಂಬಲ ನೀಡಿದ್ದ.

ಆಗಸ್ಟ್ 6,2017 ರಂದು ಹುಡುಗ ಸ್ನೇಹಿತೆ ಮನೆಗೆ ಹೋಗ್ತಿದ್ದನಂತೆ. ಅಲ್ಲಿಗೆ ಫಿಲಿಪ್ಸ್ ಸ್ನೇಹಿತನ ಜೊತೆ ಬಂದಿದ್ದಾನೆ. ಮಹಿಳೆ ವೇಷದಲ್ಲಿದ್ದವರ ಧ್ವನಿ ಮಾತ್ರ ಪುರುಷರಂತಿತ್ತು. ಇವ್ರು ಮಹಿಳೆಯರಲ್ಲ, ಮಹಿಳೆ ವೇಷದಲ್ಲಿರುವ ಪುರುಷರು ಎಂಬುದನ್ನು ಪತ್ತೆ ಹೆಚ್ಚಿದ ಹುಡುಗ ಓಡಲು ಶುರು ಮಾಡಿದ್ದಾನೆ. ಆದ್ರೆ ಹುಡುಗನನ್ನು ಬೆನ್ನುಹತ್ತಿ ಕೈ ಕಟ್ಟಿ ಫಿಲಿಪ್ಸ್ ಅತ್ಯಾಚಾರವೆಸಗಿದ್ದಾನೆ.

ಹುಡುಗ ಮನೆಯವರಿಗೆ ವಿಷ್ಯ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾನೆ. ಹುಡುಗನ ವೈದ್ಯಕೀಯ ಪರೀಕ್ಷೆ ನಡೆಸಿದ್ದ ಪೊಲೀಸರು ದೂರಿನ ಮೇಲೆ ತನಿಖೆ ಶುರು ಮಾಡಿದ್ದರು. ಫಿಲಿಪ್ಸ್ ಫೇಸ್ಬುಕ್ ಮೂಲಕ ಸಿಕ್ಕಿಬಿದ್ದ. ಫಿಲಿಪ್ಸ್ ಪದೇ ಪದೇ ವೇಷ ಬದಲಿಸಿ ಇಂಥ ಕೃತ್ಯವೆಸಗಿದ್ದಾನೆಂದು ಪೊಲೀಸರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...