alex Certify
ಕನ್ನಡ ದುನಿಯಾ       Mobile App
       

Kannada Duniya

ಪುರುಷರಿಗೆ ಮಾತ್ರ ದುಬಾರಿ ಈ ಕೆಫೆ..!

handsome-her-cafe-650-twitter_650x400_61502013211

ಮೆಲ್ಬೋರ್ನ್ ನಲ್ಲಿರೋ ‘ಹ್ಯಾಂಡ್ಸಮ್ ಹರ್’ ಮಹಿಳೆಯರಿಂದ ಮಹಿಳೆಯರಿಗಾಗಿಯೇ ಇರುವ ಕೆಫೆ. ಇತ್ತೀಚೆಗಷ್ಟೆ ಆರಂಭವಾಗಿರೋ ಈ ಕೆಫೆ ತನ್ನ ವಿಚಿತ್ರ ನಿಯಮಗಳಿಂದ್ಲೇ ಸುದ್ದಿ ಮಾಡಿದೆ. ಪುರುಷರು ಈ ಕೆಫೆಗೆ ಬಂದ್ರೆ ತಿಂಗಳಲ್ಲಿ ಒಂದು ವಾರ, ಶೇ.18ರಷ್ಟು ಹೆಚ್ಚು ಹಣ ಪಾವತಿಸಬೇಕು.

cafe

ವಿಶ್ವದಲ್ಲಿರೋ ಲಿಂಗ ತಾರತಮ್ಯದ ವಿರುದ್ಧದ ವಿಶಿಷ್ಟ ಹೋರಾಟ ಇದು. ಜೊತೆಗೆ ಪುರುಷರಿಂದ ಹೆಚ್ಚುವರಿಯಾಗಿ ಕಟ್ಟಿಸಿಕೊಂಡ ಹಣವನ್ನು ಚಾರಿಟಿ ಕಾರ್ಯಗಳಿಗೆ ಬಳಸಿಕೊಳ್ಳುವುದಾಗಿ ಕೆಫೆ ಮಾಲೀಕರು ಹೇಳ್ತಿದ್ದಾರೆ. ಇನ್ನು ಕೆಫೆಯಲ್ಲಿ ಮಹಿಳೆಯರಿಗೇ ಮೊದಲ ಆದ್ಯತೆ.

ಎಲ್ಲಾ ನಿಯಮಗಳನ್ನು ಬರೆದು ಕೆಫೆ ನೋಟಿಸ್ ಬೋರ್ಡ್ ನಲ್ಲಿ ಹಾಕಲಾಗಿದೆ. ಈ ನಿಯಮಗಳ ಬಗ್ಗೆ ಸಾಮಾಜಿಕ ತಾಣಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಇದೊಂದು ಉತ್ತಮ ಪ್ರಯತ್ನ ಅಂತಾ ಶ್ಲಾಘಿಸಿದ್ದಾರೆ. ಆದ್ರೆ ಪುರುಷರು ಅನ್ನೋ ಕಾರಣಕ್ಕೆ ಹೆಚ್ಚು ಹಣ ಪಡೆಯುವುದು ಅಕ್ಷಮ್ಯ ಎನ್ನುತ್ತಿದ್ದಾರೆ ಇನ್ನು ಕೆಲವರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...