alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ ಮೆಲಾನಿಯಾ ಟ್ರಂಪ್ ಜಾಕೆಟ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ವಲಸೆ ನೀತಿಯನ್ನು ಈಗಾಗಲೇ ವಾಪಸ್ ಪಡೆದಿದ್ದಾರೆ. ಟ್ರಂಪ್ ದಾಖಲೆಗೆ ಸಹಿ ಹಾಕಿದ ಒಂದು ದಿನದ ನಂತ್ರ ಟ್ರಂಪ್ ಪತ್ನಿ ಮೆಲಾನಿಯಾ ವಲಸೆ ಮಕ್ಕಳ ಭೇಟಿಗೆ ಬಂದಿದ್ದರು. ಈ ವೇಳೆ ಮೆಲಾನಿಯಾ ಧರಿಸಿದ್ದ ಜಾಕೆಟ್ ಈಗ ಚರ್ಚೆಯಾಗ್ತಿದೆ.

ಮೆಲಾನಿಯಾ ಟ್ರಂಪ್ ಹಸಿರು ಬಣ್ಣದ ಜಾಕೆಟ್ ತೊಟ್ಟು ವಲಸೆ ಮಕ್ಕಳ ಭೇಟಿ ಮಾಡಿದ್ದಾರೆ. ಮೆಲಾನಿಯಾ ಜಾಕೆಟ್ ಮೇಲೆ ಬರೆದಿದ್ದ ಸಂದೇಶ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. I REALLY DON’T CARE, DO U? ಎಂದು ಜಾಕೆಟ್ ಮೇಲೆ ಬರೆದಿತ್ತು.

ಹಿಂದೆ ಮಾಡೆಲ್ ಆಗಿದ್ದ ಅಮೆರಿಕಾ ಮೊದಲ ಮಹಿಳೆ ವಿನ್ಯಾಸಕಾರ ಹರ್ವೆ ಪಿಯರೆಯಿಂದ ಡ್ರೆಸ್ ಬಗ್ಗೆ ಸಲಹೆ ಪಡೆಯುತ್ತಾರೆ. ಜಾಕೆಟ್ ಬಗ್ಗೆ ಮೆಲಾನಿಯಾ ವಕ್ತಾರ ಸ್ಟೆಫಿನ್ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ಜಾಕೆಟ್ ಅಷ್ಟೆ. ಇದ್ರಲ್ಲಿ ಯಾವುದೇ ಸಂದೇಶವಿಲ್ಲ. ಮಹತ್ವಪೂರ್ಣ ಟೆಕ್ಸಾಸ್ ಪ್ರವಾಸದ ವೇಳೆ ಮಾಧ್ಯಮಗಳು ಬಟ್ಟೆ ಬಗ್ಗೆ ಗಮನ ನೀಡಬೇಕಾಗಿಲ್ಲ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...