alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಂದಿರ ದಿನದಂದು ರಾಜವಂಶದ ಕುಡಿಯ ಫೋಟೋ ಬಿಡುಗಡೆ

ವಿಶ್ವದೆಲ್ಲೆಡೆ ಭಾನುವಾರದಂದು ವಿಶ್ವ ತಾಯಂದಿರ ದಿನಾಚರಣೆ ಆಚರಿಸಿದ್ದು, ಇದೇ ವೇಳೆ ಡಚ್ಚಸ್ ಆಫ್ ಸಸೆಕ್ಸ್‌ನ ರಾಜವಂಶದ ಮೇಘನ್ ಮಾರ್ಕ್ಲೆ ತಮ್ಮ ಮಗನ ಪಾದದ ಫೋಟೋ‌ ಬಿಡುಗಡೆಗೊಳಿಸಿದ್ದಾರೆ.

ಯುವರಾಜ ಹ್ಯಾರಿ‌ ಹಾಗೂ ಮೇಘನ್ ಅವರ ಪುತ್ರ ಆರ್ಚರ್ ಅವರ ಫೋಟೋವನ್ನು ಸಸೆಕ್ಸ್ ರಾಯಲ್ ನ ಅಧಿಕೃತ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ‌. ವಿಶ್ವ ತಾಯಂದಿರ ದಿನಕ್ಕೆ ಆರು ದಿನದ ಮೊದಲು ಜನಿಸಿದ್ದ ಆರ್ಚರ್ ಫೋಟೋ ಇದೀಗ ವೈರಲ್ ಆಗಿದೆ‌.

ಆರ್ಚರ್ ಇಂಗ್ಲೆಂಡ್ ರಾಜವಂಶದ ಏಳನೇ ತಲೆಮಾರಿನ ಕುಡಿಯಾಗಿದ್ದು, ರಾಣಿಯ ಎಂಟನೇ ಮರಿಮೊಮ್ಮಗನಾಗಿದ್ದಾನೆ. ಮಗುವಿನ ಪಾದದ ಫೋಟೋ ಹಾಕಿದ್ದು, ತಾಯಿಯನ್ನು ವರ್ಣಿಸುವ ಕವಿತೆಯನ್ನು ಹಾಕಿದ್ದಾರೆ. ಈಗಾಗಲೇ ಈ ಫೋಟೋಗೆ 1.7ಮಿಲಿಯನ್ ಲೈಕ್‌ಗಳು‌ ಬಂದಿದೆ.

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...