alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನ ಅತಿ ಶ್ರೀಮಂತ ಯುವತಿಯರ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ…?

ನಾರ್ವೆಯ ಈ ಸಹೋದರಿಯರೇ ಜಗತ್ತಿನ ಅತ್ಯಂತ ಕಿರಿಯ ಬಿಲಿಯನೇರ್ ಗಳು. ಅಲೆಕ್ಸಾಂಡ್ರಾಗೆ 21ರ ಹರೆಯ, ಕ್ಯಾಥರೀನಾಗೆ ಈಗ 22 ವಯಸ್ಸು. ಫೋರ್ಬ್ಸ್ ಬಿಡುಗಡೆ ಮಾಡಿರೋ ವರದಿ ಪ್ರಕಾರ ಈ ಸಹೋದರಿಯರ ಸಂಪತ್ತು 1.4 ಬಿಲಿಯನ್ ಡಾಲರ್.

Norwegian Team Champions 2017! 💪🏼❤️😁

A post shared by Alexandra (@alexandraandresen) on

ಇವರ ತಂದೆ ಇನ್ವೆಸ್ಟ್ಮೆಂಟ್ ಕಂಪನಿಯೊಂದನ್ನು ನಡೆಸ್ತಿದ್ದಾರೆ. ಆ ಕಂಪನಿಯಲ್ಲಿ ಈ ಸಹೋದರಿಯರ ಪಾಲಿದೆ. ಅಲ್ಲೇ ಇವರು ಕೆಲಸ ನಿರ್ವಹಿಸುತ್ತಾರೆ. 2007 ರಲ್ಲೇ ಅಹಾನ್ ತಮ್ಮ ಆಸ್ತಿಯ ಬಹುಪಾಲನ್ನು ಹೆಣ್ಣುಮಕ್ಕಳ ಹೆಸರಿಗೆ ಬರೆದಿದ್ದಾರೆ.

ಹಾಗಾಗಿ ಕಂಪನಿಯಲ್ಲೀಗ ಅಲೆಕ್ಸಾಂಡ್ರಾ ಹಾಗೂ ಕ್ಯಾಥರೀನಾ ಶೇ.42.2 ರಷ್ಟು ಭಾಗ ಹೊಂದಿದ್ದಾರೆ. ಸದ್ಯ ಸಂಸ್ಥೆಗೆ ತಂದೆ ಅಹಾನ್ ಅವರೇ ಮುಖ್ಯಸ್ಥರು. ಅಲೆಕ್ಸಾಂಡ್ರಾಗೆ ಕುದುರೆ ಸವಾರಿಯ ಹುಚ್ಚಿದೆ. ಎಷ್ಟೋ ರೇಸ್ ಗಳಲ್ಲಿ ಕೂಡ ಪಾಲ್ಗೊಂಡಿದ್ದಾಳೆ.

ಈಗಾಗ್ಲೇ ಆಕೆಯ ನಿಶ್ಚಿತಾರ್ಥವೂ ನೆರವೇರಿದೆ. MMA ಫೈಟರ್ ಜೋಕಿಮ್ ಎಂಬಾತನ ಜೊತೆಗೆ ಎಂಗೇಜ್ ಆಗಿದ್ದಾಳೆ. ಕ್ಯಾಥರೀನಾಗೆ ಫ್ಯಾಷನ್ ಬಗ್ಗೆ ಆಸಕ್ತಿ ಇದೆ. ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದ ಈಕೆ ದಂಡ ಕೂಡ ಕಟ್ಟಿದ್ದಳು. ಹಣಕ್ಕೇನೂ ಕೊರತೆ ಇಲ್ಲದೇ ಇರೋದ್ರಿಂದ ಆರಾಮಾಗಿ ಪ್ರವಾಸ ಮಾಡ್ತಾರೆ ಈ ಸಹೋದರಿಯರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...