alex Certify
ಕನ್ನಡ ದುನಿಯಾ       Mobile App
       

Kannada Duniya

ಇವರು ಬಿಲ್ ಗೇಟ್ಸ್ ಗಿಂತಲೂ ಶ್ರೀಮಂತರಂತೆ..!

ZARAಝಾರಾ ಕಂಪನಿಯ ಒಡೆಯ ಅಮನಿಗೋ ಒರ್ತೆಗಾ ಅವರ ಬಗ್ಗೆ ನಿಮಗೆ ಗೊತ್ತಾ? ಇವರು ಜಗತ್ತಿನ ಅತ್ಯಂತ ಸಿರಿವಂತ ವ್ಯಕ್ತಿ ಎನಿಸಿಕೊಂಡಿರುವ ಬಿಲ್ ಗೇಟ್ಸ್ ರನ್ನೇ ಹಿಂದಿಕ್ಕಿದ್ದಾರಂತೆ. ಫೋರ್ಬ್ಸ್ ಮ್ಯಾಗಝೀನ್ ವರದಿ ಪ್ರಕಾರ ಅಮನಿಗೋ ಅವರ ಆಸ್ತಿ 77.8 ಬಿಲಿಯನ್ ಡಾಲರ್ ನಿಂದ 79.5 ಬಿಲಿಯನ್ ಡಾಲರ್ ನಷ್ಟಿದೆ.

ಬಿಲ್ ಗೇಟ್ಸ್ ಅವರ ಒಟ್ಟು ಆಸ್ತಿ 78.5 ಬಿಲಿಯನ್ ಡಾಲರ್. ಆದ್ರೆ ಅಮನಿಗೋ ಅವರ ಬಳಿ 78.9 ಬಿಲಿಯನ್ ಡಾಲರ್ ಆಸ್ತಿ ಇದೆಯಂತೆ. ಫೋರ್ಬ್ಸ್ ಪ್ರಕಾರ ಅಮನಿಗೋ ಶ್ರೀಮಂತಿಕೆಯಲ್ಲಿ ಬಿಲ್ ಗೇಟ್ಸ್ ರನ್ನು ಮೀರಿಸಿದ್ದಾರೆ. ಅಮನಿಗೋ ಕೇವಲ ಸಿರಿವಂತಿಕೆಯಿಂದ ಮಾತ್ರವಲ್ಲ ಸರಳತೆಯಿಂದ್ಲೂ ಹೆಸರಾಗಿದ್ದಾರೆ. ಅಮನಿಗೊ ಕಚೇರಿ ಕ್ಯಾಂಟೀನ್ ನಲ್ಲಿ ಕುಳಿತು ಸಿಬ್ಬಂದಿ ಜೊತೆ ಊಟ ಮಾಡ್ತಾರೆ.

ವಿಶೇಷ ಅಂದ್ರೆ ಝಾರಾ ಬೆಸ್ಟ್ ಬ್ರಾಂಡ್ ಎನಿಸಿಕೊಂಡಿದ್ರೂ ಅಮನಿಗೊ ತಮ್ಮ ಕಂಪನಿಯ ಉಡುಪು ಧರಿಸುವುದಿಲ್ಲ. ಅಮನಿಗೋ ತುಂಬಾ ಬಡ ಕುಟುಂಬದಿಂದ ಬಂದವರು, ತಂದೆ ರೈಲ್ವೆ ನೌಕರರಾಗಿದ್ರು, ತಾಯಿ ಮನೆ ಕೆಲಸ ಮಾಡ್ತಾ ಇದ್ರು. ಹಾಗಾಗಿ ಸರಳತೆ ಅವರ ರಕ್ತದಲ್ಲೇ ಬಂದಿದೆ. ಅಮನಿಗೋ ತಮಗಿಂತ 18 ವರ್ಷ ಕಿರಿಯ ಸಹೋದ್ಯೋಗಿಯನ್ನೇ ಎರಡನೇ ಮದುವೆಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...