alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆ ಹಿಂಭಾಗದಲ್ಲಿದ್ದರೂ ಮಾದರಿಯಾಗಿದೆ ಈತನ ಸಾಧನೆ

brzil

ಬ್ರೆಜಿಲ್ ದೇಶದಲ್ಲಿರುವ ಸುಮಾರು 40 ವರ್ಷ ವಯಸ್ಸಿನ ಈ ವ್ಯಕ್ತಿಯ ಹೆಸರು ಕ್ಲಾಡಿಯೋ ವಿಯೆರಾ ಡೇ ಒಲಿವೆರಾ. ಈತ ಜನಿಸಿದಾಗಲೇ ತಲೆ ಹಿಂಭಾಗಕ್ಕೆ ಬಾಗಿದ ಸ್ಥಿತಿಯಲ್ಲಿದೆ. ವೈದ್ಯರು ಎಷ್ಟೆಲ್ಲಾ ಪ್ರಯತ್ನಿಸಿದರೂ, ಸರಿಪಡಿಸಲು ಸಾಧ್ಯವಾಗಿಲ್ಲ.

ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಇಂತಹ ಕೇಸ್ ಗಳಿಗೆ ಆರ್ಥೋಗ್ರೈಪೊಸಿಸ್ ಎಂದು ಕರೆಯಲಾಗುತ್ತದೆ. ತಲೆ ಹಿಂಭಾಗಕ್ಕೆ ಬಾಗಿರುವುದರಿಂದ ಕ್ಲಾಡಿಯೋಗೆ ಏನೂ ಮಾಡುವುದು ಸಾಧ್ಯವಿಲ್ಲ. ಆದರೂ, ಛಲಬಿಡದ ವಿಕ್ರಮನಂತೆ ಸ್ಪಂದಿಸದ ದೇಹವನ್ನೇ ಬಳಸಿಕೊಂಡು ಸಾಧನೆ ಮಾಡಿದ್ದಾನೆ. ಬಾಯಿಯಲ್ಲೇ ಪೆನ್ನು ಹಿಡಿದು ಬರೆಯುವುದನ್ನು ಕಲಿತು, ಜೊತೆಗೆ, ಕಂಪ್ಯೂಟರ್, ಮೊಬೈಲ್ ಮೊದಲಾದವುಗಳನ್ನು ಬಳಸುವುದನ್ನು ಕಲಿತಿದ್ದಾನೆ.

ಇಷ್ಟು ಮಾತ್ರವಲ್ಲ, ಕ್ಲಾಡಿಯೋ ನ್ಯೂನ್ಯತೆ ಇದ್ದರೂ ದೃತಿಗೆಡದೇ ಓದಿದ್ದಾನೆ. ಫೆಯಿರಾ ಡೆ ಸಂತಾನಾ ಸ್ಟೇಟ್ ವಿಶ್ವವಿದ್ಯಾಲಯದಿಂದ ಅಕೌಂಟೆಂಟ್ ವ್ಯಾಸಂಗ ಮಾಡಿ ಪದವಿ ಗಳಿಸಿದ್ದಾನೆ. ವಿಶೇಷ ಕಾರ್ಯಕ್ರಮಗಳಲ್ಲಿ ಭಾಷಣ ಕೂಡ ಮಾಡುತ್ತಾನೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...