alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನಲ್ಲೇ ಅತ್ಯಂತ ಫಿಟ್ ಆಗಿರೋ ಮಹಿಳೆ ಈಕೆ….

fittest

ಆಸ್ಟ್ರೇಲಿಯಾದ ಅಥ್ಲೀಟ್ ಟಿಯಾ ಕ್ಲೇರ್ ಟೂಮಿ ಜಗತ್ತಿನಲ್ಲಿ ಅತ್ಯಂತ ಫಿಟ್ ಆಗಿರೋ ಮಹಿಳೆ. ಕ್ರಾಸ್ ಫಿಟ್ ಗೇಮ್ಸ್ ನಲ್ಲಿ ಟಿಯಾ ಮೊದಲ ಸ್ಥಾನ ಪಡೆದಿದ್ದಾಳೆ. ವೇಯ್ಟ್ ಲಿಫ್ಟರ್ ಟಿಯಾ 2016ರ ರಿಯೋ ಒಲಿಂಪಿಕ್ಸ್ ನಲ್ಲೂ ಸ್ಪರ್ಧಿಸಿದ್ದರು. ಓವರ್ ಆಲ್ ಟಾಪರ್ ಎನಿಸಿಕೊಂಡಿದ್ರು.

ಸ್ಥಳೀಯ ಸ್ಪರ್ಧೆಗಳಲ್ಲಿ ವಿಜೇತರಾದವರು ‘ಕ್ರಾಸ್ ಫಿಟ್ ಗೇಮ್ಸ್’ ನಲ್ಲಿ ಸ್ಪರ್ಧಿಸ್ತಾರೆ. ಸ್ಪರ್ಧೆಯಲ್ಲಿ ಕೆಲವೊಂದು ನಿರ್ದಿಷ್ಟ ವರ್ಕೌಟ್ ಮಾಡಿಸಲಾಗುತ್ತದೆ. ರನ್ ಸ್ವಿಮ್ ರನ್ಸ್, ಮಸಲ್ ಅಪ್ಸ್ ಸೇರಿದಂತೆ ಇತರ ಕಠಿಣ ಕಸರತ್ತನ್ನು ಸ್ಪರ್ಧಿಗಳು ಪ್ರದರ್ಶಿಸಬೇಕು. ಈ ಬಾರಿ ಅದೇನೇ ಆದ್ರೂ ಗೆಲ್ಲಲೇಬೇಕು ಅನ್ನೋ ಛಲ ಟಿಯಾಳಲ್ಲಿತ್ತು. ಆತ್ಮವಿಶ್ವಾಸವೇ ಆಕೆಗೆ ಗೆಲುವು ತಂದುಕೊಟ್ಟಿದೆ.

ಟಿಯಾ ಈಗ ‘ಫಿಟ್ಟೆಸ್ಟ್ ವುಮನ್ ಆನ್ ಅರ್ತ್’ ಎನಿಸಿಕೊಂಡಿದ್ದಾಳೆ. ಫಿಟ್ಟೆಸ್ಟ್ ವುಮನ್ ಅನ್ನೋ ಟೈಟಲ್ ಗೆದ್ದ ಬಳಿಕ ಟಿಯಾ ತನ್ನ ಕುಟುಂಬ, ಸ್ನೇಹಿತರು ಮತ್ತು ತರಬೇತುದಾರರಿಗೆ ಧನ್ಯವಾದ ಹೇಳಿದ್ದಾರೆ. ಎಲ್ಲರ ಬೆಂಬಲ ಮತ್ತು ಸಹಕಾರದಿಂದ್ಲೇ ಈ ಸಾಧನೆ ಮಾಡಲು ಸಾಧ್ಯವಾಯ್ತು ಅಂತಾ ಅಭಿಪ್ರಾಯಪಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...