alex Certify
ಕನ್ನಡ ದುನಿಯಾ       Mobile App
       

Kannada Duniya

30 ಕೆಜಿ ತೂಕವಿದ್ದಾನೆ 10 ತಿಂಗಳ ಈ ಪುಟಾಣಿ

ಮೆಕ್ಸಿಕೋದಲ್ಲಿ 10 ತಿಂಗಳ ಪುಟ್ಟ ಮಗುವೊಂದು 9 ವರ್ಷದ ಮಗುವಿನಷ್ಟು ತೂಕವಿದೆ. ಲೂಯಿಸ್ ಮ್ಯಾನ್ಯುಯೆಲ್ ಅನ್ನೋ ಈ ಗಂಡು ಮಗುವಿನ ತೂಕ ಬರೋಬ್ಬರಿ 30 ಕೆಜಿ. ಹುಟ್ಟುವಾಗ ಮಗುವಿನ ತೂಕ ಸಹಜವಾಗಿಯೇ ಇತ್ತು. ಒಂದು ತಿಂಗಳ ನಂತರ ಈ ರೀತಿ ಏರಿಕೆಯಾಗಲು ಆರಂಭಿಸಿದೆ.

ಲೂಯಿಸ್ ಗೆ ಪ್ರಾಡರ್ ವಿಲ್ಲಿ ಅನ್ನೋ ಖಾಯಿಲೆಯಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ವಿಪರೀತ ತೂಕ ಹೆಚ್ಚಳದಿಂದಾಗಿ ಮಗು ಉಸಿರಾಡಲು ಕಷ್ಟಪಡುತ್ತಿದೆ. ಈಗಾಗ್ಲೇ ಲೂಯಿಸ್ ಗೆ ಎರಡು ವರ್ಷದ ಮಗುವಿನ ಬಟ್ಟೆಗಳನ್ನು ಹಾಕ್ತಿದ್ದಾರಂತೆ. ಯಾವಾಗಲು ಮಗು ಆಯಾಸಗೊಂಡು ನಿದ್ದೆ ಮಾಡುತ್ತಲೇ ಇರುತ್ತದೆ.

ಮಗುವಿನ ಚಿಕಿತ್ಸೆಗಾಗಿ ಹೆತ್ತವರು ದಾನಿಗಳಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಮಗುವಿಗೆ ಹಾರ್ಮೋನ್ ಇಂಜೆಕ್ಷನ್ ಗಳ ಅಗತ್ಯವಿದ್ದು, ಒಂದು ಇಂಜೆಕ್ಷನ್ ಗೆ 400 ಡಾಲರ್ ಖರ್ಚಾಗಲಿದೆಯಂತೆ. ಲೂಯಿಸ್ ನ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಇನ್ನೂ 2 ತಿಂಗಳು ಬಾಕಿ ಇದೆ. ಆಗಲೇ ಮಗು 9 ವರ್ಷದ ಬಾಲಕನಷ್ಟು ತೂಕವಿದೆ.

ಈತ ಜಗತ್ತಿನ ಅತ್ಯಂತ ದಪ್ಪನೆಯ ಮಗು ಅಂತಾನೇ ಹೇಳಲಾಗ್ತಿದೆ. ಲೂಯಿಸ್ ಗೆ ಯಾವಾಗಲೂ ಹಸಿವು. ಸದಾ ಆಹಾರ ತಿನ್ನಿಸುತ್ತಲೇ ಇರಬೇಕು. ಮಾರಿಯೋ ಗೊಂಜಾಲೆಜ್ ಹಾಗೂ ಇಸಾಬೆಲ್ ಪಂಟೋಜಾ ದಂಪತಿ ಮಗುವಿನ ಚೇತರಿಕೆಗಾಗಿ ಆಸ್ಪತ್ರೆಗೆ ಅಲೆಯುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...