alex Certify
ಕನ್ನಡ ದುನಿಯಾ       Mobile App
       

Kannada Duniya

ಹಲ್ಲಿನಿಂದ ಟ್ರಕ್ ಎಳೀತಾನೇ ಈತ, ಅದ್ರಲ್ಲೂ ಇದೇ ವಿಶೇಷ

strongman-pharaoh-karimಈತ ತನ್ನ ಹಲ್ಲಿನಿಂದಲೇ ಪ್ರಯಾಣಿಕರಿರುವ ಟ್ರಕ್ ಗೆ ಹಗ್ಗ ಕಟ್ಟಿ ಎಳೆಯುತ್ತಾನೆ. ಅಷ್ಟೇ ಅಲ್ಲ ಗಾಜಿನ ರಾಶಿಯ ಮೇಲೆ ಸಲೀಸಾಗಿ ನಡೆದಾಡುತ್ತಾನೆ. ಜೊತೆಗೆ ಭಾರವಾದ ಕಲ್ಲನ್ನು ತನ್ನ ಎದೆಯ ಮೇಲಿರಿಸಿಕೊಂಡು ಅದನ್ನು ಸುತ್ತಿಗೆಯಿಂದ ಹೊಡೆಸಿಕೊಳ್ಳುತ್ತಾನೆ. ಇಂತದನ್ನು ಬಹಳಷ್ಟು ಮಂದಿ ಮಾಡುತ್ತಾರೆ ಎನ್ನುತ್ತೀರಾ. ಅಲ್ಲೇ ಇರೋದು ವಿಶೇಷ.

ಈಜಿಪ್ಟ್ ರಾಜಧಾನಿ ಕೈರೋದ ಇಂಬಾಬಾದಲ್ಲಿರುವ ಕರೀಂ ಹುಸೇನ್ ಅಂತಹ ದೇಹದಾರ್ಢ್ಯವನ್ನೇನೂ ಹೊಂದಿಲ್ಲ. ಆದರೂ ಇಂತಹ ಸಾಹಸ ಮಾಡುತ್ತಾನೆ. ಮತ್ತೂ ಒಂದು ವಿಶೇಷವೆಂದರೆ ಈತನ ಆಹಾರ. ಈತ ದಿನಕ್ಕೆ ಮೂರು ಲೋಟ ಭರ್ತಿಯಾಗುವಷ್ಟು ಗಾಜಿನ ಚೂರುಗಳನ್ನು ತಿನ್ನುತ್ತಾನಂತೆ. ಇದನ್ನು ತಿಂದಿದ್ದರಿಂದ ಈತನಿಗೆ ಆ ಶಕ್ತಿಯೇನು ಬಂದಿಲ್ಲ. ಬಾಲ್ಯದಿಂದಲೂ ಈತ ಅದನ್ನು ಹವ್ಯಾಸವಾಗಿರಿಸಿಕೊಂಡಿದ್ದಾನೆ.

strongman-pharaoh-karim6

ಈತ ಬಾಲ್ಯದಲ್ಲಿ ಗಾಜಿನ ಚೂರುಗಳನ್ನು ತಿನ್ನುವುದನ್ನು ಕಂಡು ಗಾಬರಿಯಾದ ಪೋಷಕರು, ಹಲವಾರು ವೈದ್ಯರ ಬಳಿ ತೋರಿಸಿದರೂ ಪ್ರಯೋಜನವಾಗಿಲ್ಲ. ಈತನನ್ನು ಪರೀಕ್ಷಿಸಿದ ವೈದ್ಯರು ಅದನ್ನೆಲ್ಲಾ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಈತನಿಗಿದೆ ಎಂದರಂತೆ. ತನ್ನ ಮಕ್ಕಳಿಗೂ ತನ್ನ ಸಾಹಸವನ್ನು ಕಲಿಸಿರುವ ಈತ ಅವರುಗಳ ಮೇಲೆ ಗಾಜಿರಿಸಿ ಅದರ ಮೇಲೆ ತಾನು ನಡೆಯುತ್ತಾನೆ. ಆದರೆ ತನ್ನಂತೆ ತನ್ನ ಮಕ್ಕಳು ಗಾಜುಗಳನ್ನು ಮಾತ್ರ ತಿನ್ನಬಾರದು ಎನ್ನುತ್ತಾನೆ ಈತ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...