alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕವಾಗಿ ಕಾಣಿಸಿಕೊಂಡ ನೇಪಾಳದ ಜೀವಂತ ದೇವತೆ

ಕಠ್ಮಂಡು: ನೇಪಾಳದಲ್ಲಿ ಜೀವಂತ ದೇವತೆ ಎಂದು ನಂಬಿಕೊಂಡಿರುವ ತ್ರಿಷ್ಣಾ ಶಕ್ಯ ಒಂದು ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಇವರ ದರ್ಶನದಿಂದ ಅಲ್ಲಿನ ಜನ ಪುನೀತರಾಗಿದ್ದಾರೆ. ಅಲ್ಲಿನ ಸಾಂಪ್ರದಾಯಿಕ ದೇವರಾಜ ಇಂದ್ರ ಜಾತ್ರಾ ಉತ್ಸವದಲ್ಲಿ ಕಾಣಿಸಿಕೊಳ್ಳುವ ಮೂಲಕ ದೇವತೆ ಸಾರ್ವಜನಿಕ ದರ್ಶನ ನೀಡಿದ್ದಾರೆ.

ಉತ್ತಮ ಮಳೆ ಮತ್ತು ಸುಗ್ಗಿಗಾಗಿ ಅಲ್ಲಿನ ಜನ ದೇವರಾಜ ಇಂದ್ರನನ್ನು ನಂಬಿಕೊಳ್ಳುವ ಪರಿಪಾಠವಿದೆ.

ಯುನೆಸ್ಕೋ ಪಾರಂಪರಿಕ ತಾಣ ಪ್ರದೇಶವಾದ ಬಸಂತಪುರದ ದರ್ಬಾರ್ ಸ್ಕ್ವೇರ್ನಲ್ಲಿರುವ ಕುಮಾರಿ ಘರ್ ನಿಂದ ಶಕ್ಯರನ್ನು ಕರೆತರಲಾಯಿತು. ರಥದಲ್ಲಿ ಆಕೆಯಲ್ಲಿ ಕುಳ್ಳಿರಿಸಿ ಮೆರವಣಿಗೆಯನ್ನು ಮಾಡಿದಾಗ ಆ ಸಂದರ್ಭ ಕಣ್ತುಂಬಿಕೊಳ್ಳಲು ದೊಡ್ಡ ಜನ ಸಮೂಹವೇ ಅಲ್ಲಿ ಸೇರಿತ್ತು.

ಮೆರವಣಿಗೆಯಲ್ಲಿ ಸ್ಥಳೀಯ ಅನೇಕ ಸಾಂಪ್ರದಾಯಿಕ ಕಲಾ ನೃತ್ಯ ಪ್ರದರ್ಶನಗಳು ಕಳೆಗಟ್ಟಿದ್ದವು. ನೇಪಾಳದಲ್ಲಿ ಆಚರಣೆಯಲ್ಲಿರುವ ಭಾದ್ರ ಶುಕ್ಲ ಚತುರ್ದಶಿಯಿಂದ ಕಠ್ಮಂಡು ಕಣಿವೆಯಲ್ಲಿ ಇಂದ್ರ ಜಾತ್ರೆಯು ಎಂಟು ದಿನ ವೈಭವೋಪೇತವಾಗಿ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...