alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾದ ಈ ಚೆಲುವೆ ಯಾರು ಗೊತ್ತಾ..?

jia

‘ಜಿಯಾ ಜಿಯಾ’ ಇದು ಚೀನಾದಲ್ಲಿ ತಯಾರಾಗಿರುವ ಹೊಚ್ಚ ಹೊಸ ರೋಬೋಟ್. ಇದು ಥೇಟ್ ಮನುಷ್ಯರಂತೆಯೇ ವರ್ತಿಸುತ್ತದೆ. ಈ ರೋಬೋಟ್ ನಿಮ್ಮ ಜೊತೆ ಮಾತನಾಡಬಲ್ಲದು, ಮುಖದಲ್ಲಿ ನಗು, ಕೋಪ, ದುಃಖ ಹೀಗೆ ಎಲ್ಲ ರೀತಿಯ ಭಾವನೆಗಳನ್ನು ಕೂಡ ವ್ಯಕ್ತಪಡಿಸುತ್ತದೆ. ಥೇಟ್ ಮನುಷ್ಯರನ್ನೇ ಹೋಲುವ ಚೀನಾದ ಮೊದಲ ರೋಬೋಟ್ ಇದು.

jia-1

ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಎಂಜಿನಿಯರ್ ಗಳು ಈ ರೋಬೋಟ್ ಅನ್ನು ನಿರ್ಮಿಸಿದ್ದಾರೆ. ಇನ್ನೊಂದು 10 ವರ್ಷಗಳಲ್ಲಿ ಇಂತಹ ರೋಬೋಟ್ ಗಳು ರೆಸ್ಟೋರೆಂಟ್, ಆಸ್ಪತ್ರೆ ಮತ್ತು ಮನೆಗಳಲ್ಲಿ ಮನುಷ್ಯರು ಮಾಡುವ ಎಲ್ಲ ಕೆಲಸಗಳನ್ನೂ ಮಾಡಲು ಆರಂಭಿಸುತ್ತವೆ ಅಂತಾ ಟೀಮ್ ಲೀಡರ್ ಚೆನ್ ಕ್ಸಿಯೋಪಿಂಗ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು 5-10 ವರ್ಷಗಳಲ್ಲಿ ಇಂತಹ ರೋಬೋಟ್ ಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಲಿದೆ ಅನ್ನೋ ವಿಶ್ವಾಸ ಅವರದ್ದು.

jia-2

ಚೀನಾದ ಸಾಂಪ್ರದಾಯಿಕ ಉಡುಗೆ, ಉದ್ದನೆಯ ತಲೆಗೂದಲು, ಅಂದವಾದ ಮುಖ ಇವನ್ನೆಲ್ಲ ನೋಡಿದ್ರೆ ಜಿಯಾಜಿಯಾ ಒಂದು ರೋಬೋಟ್ ಅಂತ ಹೇಳಲು ಸಾಧ್ಯವೇ ಇಲ್ಲ. ಥೇಟ್ ಮನುಷ್ಯರಂತೆಯೇ ಕಾಣಿಸುತ್ತದೆ. ಸಣ್ಣ ಪುಟ್ಟ ಪ್ರಶ್ನೆಗಳಿಗಂತೂ ಜಿಯಾಜಿಯಾ ಥಟ್ಟಂತ ಉತ್ತರಿಸ್ತಾಳೆ. ನಿಂಗೆ ಬಾಯ್ ಫ್ರೆಂಡ್ ಇದಾನಾ ಅಂತ ಕೇಳಿದ್ರೆ, ನಾನು ಸಿಂಗಲ್ ಆಗಿಯೇ ಇರ್ತೀನಿ ಎನ್ನುತ್ತಾಳೆ. ದಿನದ ಹವಾಮಾನ ಯಾವ ರೀತಿಯಿದೆ ಅಂತಾ ವಿವರಿಸ್ತಾಳೆ.

Subscribe Newsletter

Get latest updates on your inbox...

Opinion Poll

  • ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆಯೇ..?

    View Results

    Loading ... Loading ...