alex Certify
ಕನ್ನಡ ದುನಿಯಾ       Mobile App
       

Kannada Duniya

ಬಟ್ಟೆ ಮಡಚುತ್ತೆ ಈ ರೋಬೋಟ್, ಬೆಲೆ ಕೇಳಿದ್ರೆ….!

ಬಟ್ಟೆ ಮಡಚಿಡೋದು ಅಂದ್ರೆ ಒಂಥರಾ ಸೋಮಾರಿತನ. ಆದ್ರೆ ಈಗ ಬಟ್ಟೆಯನ್ನು ನೀವು ಮಡಚಬೇಕಾಗಿಲ್ಲ. ಆ ಕೆಲಸವನ್ನು ರೋಬೋಟ್ ಮಾಡುತ್ತೆ. ಕ್ಯಾಲಿಫೋರ್ನಿಯಾದ ಫೋಲ್ಡಿಮೇಟ್ ಅನ್ನೋ ಕಂಪನಿ ಬಟ್ಟೆ ಮಡಚುವ ರೋಬೋಟ್ ತಯಾರಿಸಿದೆ.

ಫೋಲ್ಡಿಮೇಟ್ ಅನ್ನೋದು ಈ ಮಷಿನ್ ಹೆಸರು. ಲಾಸ್ ವೇಗಾಸ್ ನಲ್ಲಿ ನಡೆದ ಸಿಇಎಸ್ ಶೋನಲ್ಲಿ ಈ ಯಂತ್ರವನ್ನು ಪ್ರದರ್ಶನಕ್ಕಿಡಲಾಗಿತ್ತು. 2019ರಲ್ಲಿ ಈ ರೋಬೋಟ್ ಗ್ರಾಹಕರಿಗೆ ಲಭ್ಯವಾಗಲಿದೆ. ಶರ್ಟ್, ಬ್ಲೌಸ್, ಪ್ಯಾಂಟ್, ಮಕ್ಕಳ ಬಟ್ಟೆಗಳಿಂದ ಹಿಡಿದು XXL ಗಾತ್ರದ ಬಟ್ಟೆಗಳನ್ನು ಕೂಡ ಇದು ಮಡಚುತ್ತದೆ.

ಟವೆಲ್, ದಿಂಬಿನ ಕವರ್, ಸಾಕ್ಸ್, ಅಂಡರ್ ವೇರ್ ಎಲ್ಲವನ್ನೂ ರೋಬೋಟ್ ಮಡಚಬಲ್ಲದು. ಬೆಡ್ ಶೀಟ್ ಮಡಚಲು ಕೂಡ ಈ ರೋಬೋಟ್ ಸಹಾಯ ಮಾಡುತ್ತದೆ. 2-4 ನಿಮಿಷಗಳಲ್ಲಿ 20-40 ಬಟ್ಟೆಗಳನ್ನು ಮಡಚುವ ಸಾಮರ್ಥ್ಯ ಈ ಮಷಿನ್ ಗಿದೆ. ಇದರ ಬೆಲೆ ಸರಿಸುಮಾರು 980 ಡಾಲರ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...