alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾನೆ ಬ್ರಿಟನ್ ಸಲಿಂಗಿ

man

ಬ್ರಿಟನ್ ನಲ್ಲಿ ಇದೇ ಮೊದಲ ಬಾರಿಗೆ ಸಲಿಂಗಿಯೊಬ್ಬ ಮಗುವಿಗೆ ಜನ್ಮ ನೀಡಿದ್ದಾನೆ. 21 ವರ್ಷದ ಹೇಡಿನ್ ಕ್ರಾಸ್ ಎಂಬಾತನಿಗೆ ಹೆಣ್ಣು ಮಗು ಜನಿಸಿದೆ. ಹೇಡಿನ್ ಕ್ರಾಸ್ ಹುಟ್ಟುವಾಗ ಹೆಣ್ಣಾಗಿದ್ದ. ನಂತರ ಸಲಿಂಗಿಯಾಗಲು ಚಿಕಿತ್ಸೆ ಪಡೆದಿದ್ದ. ಮೂರು ವರ್ಷಗಳ ಕಾಲ ಪುರುಷನಾಗಿದ್ದ.

ಮಗುವನ್ನು ಹೊಂದಬೇಕೆಂಬ ಆಸೆಯಿಂದ ಸಲಿಂಗ ಹಾರ್ಮೋನ್ ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಿದ್ದ. ಫೇಸ್ಬುಕ್ ಮೂಲಕ ಭೇಟಿಯಾದ ದಾನಿಯೊಬ್ಬನ ವೀರ್ಯದ ಮೂಲಕ ಹೇಡಿನ್ ಗರ್ಭ ಧರಿಸಿದ್ದ. ಕಳೆದ ಜನವರಿಯಲ್ಲೇ ತಾನು ಗರ್ಭ ಧರಿಸಿರೋದಾಗಿ ಪ್ರಕಟಿಸಿದ್ದ.

ಈಗ ಜನಿಸಿರೋ ಹೆಣ್ಣು ಮಗುವಿಗೆ ಟ್ರಿನಿಟಿ ಅಂತಾ ಹೆಸರಿಟ್ಟಿದ್ದಾನೆ. ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಾನು ತಾಯಿ ಅಂತಾ ನಮೂದಿಸಿದ್ದಾನೆ, ಆದ್ರೆ ತಂದೆಯ ಹೆಸರನ್ನು ಉಲ್ಲೇಖಿಸಿಲ್ಲ. ತನ್ನ ಎಗ್ ಅನ್ನು ಫ್ರೀಝ್ ಮಾಡಿಟ್ಟು ಭವಿಷ್ಯದಲ್ಲಿ ಮಗು ಹೊಂದಬೇಕೆಂಬುದು ಅವನ ಆಸೆಯಾಗಿತ್ತು.

ಆದ್ರೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಆ ಪ್ರಕ್ರಿಯೆಗೆ ಒಪ್ಪಲಿಲ್ಲ. ಖಾಸಗಿಯಲ್ಲಿ ಮಾಡಿಸಲು ಹಣವಿಲ್ಲದ ಕಾರಣ ಈಗಲೇ ಮಗುವನ್ನು ಹೊಂದಲು ಕ್ರಾಸ್ ನಿರ್ಧರಿಸಿದ್ದ. ಮತ್ತೆ ಲಿಂಗ ರೂಪಾಂತರ ಚಿಕಿತ್ಸೆಯನ್ನು ಮುಂದುವರಿಸಲು ಕ್ರಾಸ್ ತೀರ್ಮಾನಿಸಿದ್ದಾನೆ. ಬ್ರಿಟನ್ ನಲ್ಲಿ ಸಲಿಂಗಿಗೆ ಮಗು ಜನಿಸಿರೋದು ಇದೇ ಮೊದಲು ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...