alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಂತ ನಿಧಾನಗತಿಯ ರೋಲರ್ ಕೋಸ್ಟರ್ ರೈಡ್…!

ಜಪಾನ್ ಸಾಕಷ್ಟು ವಿಷಯಗಳಿಗೆ ಹೆಸರುವಾಸಿ. ಸಾಕಷ್ಟು ಆವಿಷ್ಕಾರಗಳೂ ಜಪಾನ್ ನಲ್ಲಿಯೇ ಆಗಿವೆ. ಅದರಲ್ಲೂ ತಂತ್ರಜ್ಞಾನ, ಆಟಿಕೆಗಳ ವಿಚಾರದಲ್ಲಿ ಜಪಾನ್ ಯಾವಾಗಲೂ ಮುಂದು. ಇದು ರೋಲರ್ ಕೋಸ್ಟರ್ ರೈಡ್ ವಿಚಾರದಲ್ಲೂ ಸತ್ಯ.

ಹೌದು….ಅತ್ಯಂತ ನಿಧಾನವಾದ ರೋಲರ್ ಕೋಸ್ಟರ್ ರೈಡ್ ಜಪಾನ್ ನಲ್ಲಿ ಆರಂಭವಾಗಿದೆ. ಅದೆಷ್ಟು ನಿಧಾನಗತಿಯದ್ದೆಂದರೆ ನೀವು ಊಹಿಸಲೂ ಸಾಧ್ಯವಾಗದಷ್ಟು. ಅದರ ಮೇಲೆ ಕುಳಿತ ಜನರಿಗೆ ಟ್ರಾಕ್ ಮೇಲೆ ಅದು ಚಲಿಸುತ್ತಿದೆ ಎಂಬುದೇ ಗೊತ್ತಾಗದಷ್ಟು.

7 ಮಂದಿ ವಯಸ್ಕರು ಹಾಗೂ 12 ಮಕ್ಕಳು ಒಮ್ಮೆಲೇ ಕುಳಿತುಕೊಳ್ಳಬಹುದಾದ ಈ ರೋಲರ್ ನೆಲದಿಂದ 5 ಮೀಟರ್ ಎತ್ತರದಲ್ಲಿ ಚಲಿಸುತ್ತೆ. ಇದು 140 ಮೀಟರ್ ನಷ್ಟು ಉದ್ದವಿದ್ದು, ಇದು ಜಪಾನ್ ನಲ್ಲಿರುವ ಅತ್ಯಂತ ನಿಧಾನಗತಿಯ ರೋಲರ್ ಕೋಸ್ಟರ್ ರೈಡ್ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...