alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲಾಸ್ಟಿಕ್ ಸ್ಟ್ರಾ ಬಳಕೆ ನಿಲ್ಲಿಸಿದ ಮೆಕ್ ಡೋನಾಲ್ಡ್ಸ್

ಪ್ಲಾಸ್ಟಿಕ್ ಭಾರತವೊಂದೇ ಅಲ್ಲ ವಿಶ್ವದಾದ್ಯಂತ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಮಟ್ಟಿಗೆ ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಯುತ್ತಿದೆ.  ಭಾರತದ ಕೆಲ ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ಮಧ್ಯೆ ಪ್ಲಾಸ್ಟಿಕ್ ಗೆ ಗುಡ್ ಬೈ ಹೇಳಲು ಬರ್ಗರ್ ಚೈನ್ ಮೆಕ್ ಡೋನಾಲ್ಡ್ಸ್ ಮಹತ್ವದ ಹೆಜ್ಜೆಯಿಟ್ಟಿದೆ.

ಇಂಗ್ಲೆಂಡ್ ಹಾಗೂ ಐರ್ಲ್ಯಾಂಡ್ ನಲ್ಲಿರುವ ಎಲ್ಲ ಬರ್ಗರ್ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಸ್ಟ್ರಾವನ್ನು ಮೆಕ್ ಡೋನಾಲ್ಡ್ಸ್ ನಿಷೇಧಿಸಿದೆ. ಸೆಪ್ಟೆಂಬರ್ ನಂತ್ರ ಪ್ಲಾಸ್ಟಿಕ್ ಸ್ಟ್ರಾ ಬದಲು ಪೇಪರ್ ಸ್ಟ್ರಾವನ್ನು ಬಳಸಲು ನಿರ್ಧರಿಸಿದೆ. ಇಂಗ್ಲೆಂಡ್ ನಲ್ಲಿ ಪ್ರತಿ ದಿನ 18 ಲಕ್ಷ ಸ್ಟ್ರಾ ಬಳಕೆಯಾಗ್ತಿದೆ. ಪ್ಲಾಸ್ಟಿಕ್ ಮರುಬಳಕೆ ಸಾಧ್ಯವಾಗದ ಕಾರಣ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಇನ್ನೂ ನೂರಾರು ವರ್ಷಗಳು ಹಿಡಿಯಲಿವೆ.

ಮೆಕ್ ಡೋನಾಲ್ಡ್ಸ್ ಪ್ಲಾಸ್ಟಿಕ್ ಸ್ಟ್ರಾ ಬಳಕೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಗ್ರಾಹಕರು ಪ್ಲಾಸ್ಟಿಕ್ ಸ್ಟ್ರಾ ಬಳಸದಂತೆ ಒತ್ತಡ ಹೇರಿದ್ದರು. ಕಾಗದದ ಸ್ಟ್ರಾ ಬಳಸುವಂತೆ ಅಭಿಪ್ರಾಯ ಮುಂದಿಟ್ಟಿದ್ದರು. ವರ್ಷಾರಂಭದಲ್ಲಿಯೇ ಕೆಲ ಸ್ಟೋರ್ ಗಳಲ್ಲಿ ಕಾಗದದ ಸ್ಟ್ರಾ ಬಳಕೆಯನ್ನು ಪರಿಕ್ಷಾರ್ಥವಾಗಿ ಶುರು ಮಾಡಲಾಗಿತ್ತು. ಅದ್ರಲ್ಲಿ ಯಶಸ್ಸು ಸಿಕ್ಕ ನಂತ್ರ ಈ ನಿರ್ಧಾರಕ್ಕೆ ಬರಲಾಗಿದೆ. ಮುಂದಿನ ವರ್ಷದೊಳಗೆ ಎಲ್ಲ ಕಡೆ ಪೇಪರ್ ಸ್ಟ್ರಾ ಬಳಕೆಗೆ ಬರಲಿದೆ ಎಂದು ಮೆಕ್ ಡೋನಾಲ್ಡ್ಸ್ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...