alex Certify
ಕನ್ನಡ ದುನಿಯಾ       Mobile App
       

Kannada Duniya

ಎಂಬಿಎ ಮುಗಿಸಿದ ಹುಡುಗಿ ಅಶ್ಲೀಲ ಚಿತ್ರಗಳ ತಾರೆ..!

alix5_

ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಎಂಬಿಎ ಮಾಡಿದ 26 ವರ್ಷದ ಹುಡುಗಿಯೊಬ್ಬಳು ಪೋರ್ನ್ ಸ್ಟಾರ್ ಆಗಿದ್ದಾಳೆ. 26 ವರ್ಷದ ಅಲಿಕ್ಸ್ ಕಮ್ಯೂನಿಕೇಷನ್ ನಲ್ಲಿ ಪದವಿ ಪಡೆದಿದ್ದಾಳೆ. ಜೊತೆಗೆ ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಎಂಬಿಎ ಮುಗಿಸಿದ್ದಾಳೆ. ನೌಕರಿಯಿಂದ ವಜಾಗೊಂಡ ಅಲಿಕ್ಸ್ ವೆಬ್ಕ್ಯಾಮ್ ಗರ್ಲ್ ಆಗಿ ಕೆಲಸ ಮಾಡಿದ್ಲು. ಈಗ ಅಶ್ಲೀಲ ತಾರೆಯಾಗಿ ಕೆಲಸ ಮಾಡ್ತಿದ್ದಾಳೆ.

ಹದಿಹರೆಯದಲ್ಲಿದ್ದಾಗಲೇ ಪೋರ್ನ್ ಸ್ಟಾರ್ ಆಗಬೇಕೆನ್ನುವ ಆಸೆ ಹೊಂದಿದ್ದಳಂತೆ ಅಲಿಕ್ಸ್. ಸ್ನೇಹಿತರಿಂದ ಈ ಬಗ್ಗೆ ತಿಳಿದುಕೊಂಡಿದ್ದಳಂತೆ. ಪ್ಲೇಬಾಯ್ ನಿಯತಕಾಲಿಕೆಯನ್ನು ಇಷ್ಟ ಪಡ್ತಾ ಇದ್ದ ಈಕೆ, ಕಚೇರಿಗೆ ಹೋಗಿ ಬಂದಿದ್ದಳಂತೆ. ಸಂಪ್ರದಾಯಸ್ಥ ನಗರದಿಂದ ಬಂದಿದ್ದ ಈಕೆ ಮೊದಲು ತನ್ನೆಲ್ಲ ಭಾವನೆಗಳನ್ನು ಗೌಪ್ಯವಾಗಿಟ್ಟಿದ್ದಳಂತೆ.

ಕಾಲೇಜು ಮುಗಿಸಿ, ನೌಕರಿ ಮಾಡುವಂತೆ ಈಕೆಯ ಮನೆಯವರು ಬಯಸಿದ್ದರಂತೆ. ಹಾಗೆಯೇ ಎಂಬಿಎ ಮುಗಿಸಿದ ಅಲಿಕ್ಸ್ ನೌಕರಿ ಹಿಡಿದಿದ್ದಾಳೆ. ಆದ್ರೆ ಎರಡು ಕಡೆ ವಜಾಗೊಂಡಿದ್ದಾಳೆ. ನಂತ್ರ ಮಾಡಿದ ಕೆಲಸ ವೆಬ್ಕ್ಯಾಮ್ ಗರ್ಲ್. ಕೊನೆಯದಾಗಿ ಅಶ್ಲೀಲ ಚಿತ್ರಗಳಲ್ಲಿ ನಟಿಸಲು ಶುರುಮಾಡಿದ್ದಾಳೆ.

ತನ್ನ 16ನೇ ವಯಸ್ಸಿನಲ್ಲಿಯೇ ಕನ್ಯತ್ವ ಕಳೆದುಕೊಂಡಿದ್ದೇನೆ ಎನ್ನುತ್ತಾಳೆ ಅಲಿಕ್ಸ್. ಅಲಿಕ್ಸ್ ಈ ಕೆಲಸಕ್ಕೆ ಮನೆಯವರ ಅನುಮತಿ ಇಲ್ಲ. ಆದ್ರೆ ಅವರ ಮನವೊಲಿಸುವ ಪ್ರಯತ್ನದಲ್ಲಿದ್ದಾಳೆ ಅಲಿಕ್ಸ್. ಮನಸ್ಸಿಗೆ ಬಂದದ್ದನ್ನು ಮಾಡಿ. ಬರೀ ಕನಸು ಕಾಣುತ್ತ ಕೂರಬೇಡಿ ಎನ್ನುತ್ತಾಳೆ ಈ ಬೆಡಗಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...