alex Certify
ಕನ್ನಡ ದುನಿಯಾ       Mobile App
       

Kannada Duniya

ಗನ್ ತೋರಿಸಿ ಮೇಯರ್ ಕಾರು ಕಳವು

ಕರಾಚಿ: ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದರೋಡೆಕೋರರ ಹಾವಳಿಗೆ ಇದೀಗ ಕರಾಚಿ ಮೇಯರ್ ಕಾರ್ ಕೂಡ ಬಲಿಪಶುವಾಗಿದೆ.

ಮೂವರು‌ ಅಪರಿಚಿತರು ಏಕಾಏಕಿ ಮೇಯರ್ ಕಾರ್ ಮೇಲೆ ದಾಳಿ ನಡೆಸಿ ಗನ್ ಹಿಡಿದು ಬೆದರಿಸಿ, ಕಾರನ್ನು ಕಳವು ಮಾಡಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳಲ್ಲಿ ವರದಿಯಾಗಿದೆ.

ಮೇಯರ್ ಅವರು ಬಳಸುತ್ತಿದ್ದ ಟೊಯೋಟಾ ಕರೋಲಾ‌ ಕಾರನ್ನು, ಅಪರಿಚಿತರು ಕದ್ದಿದ್ದಾರೆ. ಆದರೆ ಘಟನೆ ನಡೆಯುವ ವೇಳೆ ಕಾರನ್ನು ಮೇಯರ್ ಸಂಬಂಧಿಕರು ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಇತ್ತೀಚಿನ ದಿನದಲ್ಲಿ ಸರಕಾರಿ ವಾಹನಗಳ ಕಳ್ಳತನ ದೇಶದಲ್ಲಿ ಹೆಚ್ಚಾಗಿದೆ. ಈ ವಾಹನಗಳಿಗೆ ಜಿಪಿಎಸ್ ಟ್ರ್ಯಾಕರ್ ಇಲ್ಲದಿರುವುದೇ ಈ‌ ಸಮಸ್ಯೆಗೆ ಕಾರಣ. ವಾಹನಗಳ್ಳರನ್ನು ಹಿಡಿದುಕೊಟ್ಟವರಿಗೆ ಅಥವಾ ಸುಳಿವು ನೀಡಿದವರಿಗೆ ಐದು ಲಕ್ಷ ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...