alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯಕಿಯ ಎದೆ ಸ್ಪರ್ಶಿಸಿ ಕ್ಷಮೆ ಯಾಚಿಸಿದ ಬಿಷಪ್

ಅಮೆರಿಕದ ಪ್ರಸಿದ್ದ ಗಾಯಕಿ ಅರೆಥಾ ಫ್ರಾಂಕ್ಲಿನ್‌ ಅಂತ್ಯಕ್ರಿಯೆ ವೇಳೆ ನಡೆದ ಘಟನೆಗೆ ಬಿಷಪ್‌ ಚಾರ್ಲ್ಸ್ ಎಚ್‌ ಎಲಿಸ್‌-3 ಕ್ಷಮೆ ಯಾಚಿಸಿದ್ದಾರೆ.

ಅಂತ್ಯಕ್ರಿಯೆ ವೇಳೆ 25 ವರ್ಷದ ಪಾಪ್‌ ಸಿಂಗರ್‌ ಓರ್ವರ ಎದೆಯ ಭಾಗವನ್ನು ಮುಟ್ಟಿರುವ ಬಗ್ಗೆ ಅವರ ಮೇಲೆ ಆರೋಪ ಕೇಳಿ ಬಂದಿತ್ತು. ಅರೆಥಾ ಫ್ರಾಂಕ್ಲಿನ್‌ ಅವರ ಪ್ರಸಿದ್ಧ ಹಾಡುಗಳನ್ನು ಹಾಡಿದ ಗಾಯಕಿಯನ್ನು ಬಿಷಪ್‌ ಅಭಿನಂದಿಸಿದ್ದರು.

ಈ ವೇಳೆ ಬಿಷಪ್‌ ಹುಡುಗಿಯ ಎದೆಯ ಭಾಗವನ್ನು ಮುಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಪೂರಕವಾಗಿ ಫೋಟೊಗಳೂ ಬಿಡುಗಡೆಯಾಗಿದ್ದವು.

ಈ ಸಂಬಂಧ ಬಿಷಪ್‌ ಹೇಳಿಕೆ ನೀಡಿದ್ದು, ಆತ್ಯಂತ ಆತ್ಮೀಯತೆಯಿಂದ ಗಾಯಕಿನ್ನು ಅಭಿನಂದಿಸಿದೆ. ಇದರಲ್ಲಿ ಯಾವುದೇ ಕೆಟ್ಟ ಉದ್ಧೇಶಗಳಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನಗೆ ಯಾವುದೇ ಮಹಿಳೆಯ ಎದೆಯ ಭಾಗವನ್ನು ಮುಟ್ಟುವ ಇಚ್ಚೆ ಇಲ್ಲ. ಬಹುಷಃ ನಾನು ಮಿತಿ ಮೀರಿ ಅವಳವನ್ನು ಅಭಿನಂದಿಸಿದೆ. ವೇದಿಕೆಯಲ್ಲಿ ಈ ರೀತಿ ವರ್ತಿಸಿ, ನಿಮ್ಮೆಲ್ಲರಿಗೆ ತೊಂದರೆ ಮಾಡಿದ್ದಕ್ಕೆ ಕ್ಷಮೆ ಇರಲಿ ಎಂದು ಬಿಷಪ್‌ ಹೇಳಿಕೆ ನೀಡಿದ್ದಾರೆ.

ಅರೆಥಾ ಫ್ರಾಂಕ್ಲಿನ್‌ ಅಂತ್ಯಕ್ರಿಯೆಯಲ್ಲಿ 60ರ ದಶಕದಲ್ಲಿ ಅವರು ಹಾಡಿದ ಹಾಡುಗಳನ್ನು ಗಾಯಕಿ ಹಾಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...