alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಲೂ ವೇಲ್ ಗೇಮ್ ಮಾಸ್ಟರ್ ಮೈಂಡ್ ರಷ್ಯಾ ಹುಡುಗಿ ಅರೆಸ್ಟ್

ಆತ್ಮಹತ್ಯಾ ಆಟ ಬ್ಲೂ ವೇಲ್ ಗೇಮ್ ಮಾಸ್ಟರ್ ಮೈಂಡ್ ಸಿಕ್ಕಿಬಿದ್ದಿದ್ದಾಳೆ. 17 ವರ್ಷದ ಹುಡುಗಿಯನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ. ಮನೋವಿಜ್ಞಾನ ಅಧ್ಯಯನ ಮಾಡುತ್ತಿರುವ ಹುಡುಗಿ ಬ್ಲೂ ವೇಲ್ ಗೇಮ್ ಮಾಸ್ಟರ್ ಮೈಂಡ್ ಎಂಬುದನ್ನು ಒಪ್ಪಿಕೊಂಡಿದ್ದಾಳೆ. ರಷ್ಯಾ ಕೋರ್ಟ್ ವಿಚಾರಣೆ ನಡೆಸಿ ಮೂರು ವರ್ಷಗಳ ಜೈಲು ಶಿಕ್ಷೆ ನೀಡಿದೆ.

ಗೇಮ್ ಮೂಲಕ ತನ್ನ ಗಾಳಕ್ಕೆ ಬೀಳಿಸಿಕೊಳ್ತಿದ್ದ ಹುಡುಗಿ ಬ್ಲಾಕ್ ಮೇಲ್ ಮಾಡ್ತಿದ್ದಳಂತೆ. ಗೇಮ್ ಮುಂದುವರೆಸದಿದ್ದಲ್ಲಿ ಕುಟುಂಬಸ್ಥರನ್ನು ಹತ್ಯೆ ಮಾಡುವುದಾಗಿ ಬೆದರಿಸುತ್ತಿದ್ದಳಂತೆ. ಹುಡುಗಿ ಮನೆಯವರು ಹಾಗೂ ಸ್ನೇಹಿತರಿಂದ ಪೊಲೀಸರು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.

2013ರಲ್ಲಿ ರಷ್ಯಾದ ಫಿಲಪ್ ಬುಡೆಕಿನ್ ಬ್ಲೂ ವೇಲ್ ಗೇಮ್ ಶುರುಮಾಡಿದ್ದ. 50 ದಿನದೊಳಗೆ ಈ ಗೇಮ್ ಮುಗಿಸಬೇಕಾಗುತ್ತದೆ. ಗೇಮ್ ಎಡ್ಮಿನ್ ನೀಡಿದ ಸಂದೇಶವನ್ನು ಪಾಲಿಸಬೇಕಾಗುತ್ತದೆ. ಸದ್ಯ ಫಿಲಿಪ್ ಜೈಲಿನಲ್ಲಿದ್ದಾನೆ. ಆದ್ರೂ ಗೇಮ್ ವೈರಲ್ ಆಗ್ತಿದೆ. ಈವರೆಗೆ 130 ಮಂದಿ ಈ ಗೇಮ್ ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತದಲ್ಲೂ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...