alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಶೂಗಳ ಬಗ್ಗೆ ಕೇಳಿದ್ರೆ, ಕೊಳ್ಳೋದಿರಲಿ ನೋಡಲೂ ಮನಸ್ಸು ಮಾಡೋದಿಲ್ಲ

ಸಾಮಾಜಿಕ ತಾಣದಲ್ಲಿ ಕೆಲವು ದಿನಗಳಿಂದಲೂ ಶೂ ಬಗ್ಗೆ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಖ್ಯಾತ ಕಂಪನಿಯ ಈ ಉತ್ಪನಕ್ಕೆ ಗ್ರಾಹಕ ಕಿಡಿ ಕಾರಿದ್ದಾರೆ. ಇನ್ನು ಈ ಶೂಗಳಲ್ಲಿ ಅಂತಹದ್ದೇನಿದೆ? ಏಕೆ ಜನ ಈ ಶೂಗೆ ಹಿಡಿ ಶಾಪ ಹಾಕುತ್ತಿದ್ದಾರೆ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಇಟಲಿಯ ಖ್ಯಾತ ಕಂಪನಿ ಸ್ನಿಕರ್ ಈ ಶೂ ಮಾರುಕಟ್ಟಿಗೆ ತಂದಿದೆ. ಗೋಲ್ಡನ್ ಗೂಸ್ ಎಂಬ ಹೆಸರಿನಲ್ಲಿ ಕಂಪನಿ ಈ ಶೂಗಳನ್ನು ಮಾರುಕಟ್ಟಿಗೆ ಬಿಟ್ಟಿದೆ. ಈ ಶೂಗಳು ಬೇರೆ ಶೂಗಳಿಗೆ ಹೋಲಿಸಿದ್ರೆ, ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ.

ಕಂಪನಿ ಈ ಶೂಗಳಿಗೆ ಹಳೆಯ ಟಚ್ ನೀಡಿದೆ. ಶೂನ ಮುಂಭಾಗದಲ್ಲಿ ಎರಡು ಟೇಪ್ ಹಾಗೂ ಹಿಂಭಾಗದಲ್ಲಿ ಟೇಪ್ ಕಾಣುತ್ತದೆ. ಶೂಗೆ ನ್ಯೂ ಲುಕ್ ನೀಡಲು ಕಂಪನಿ ಈ ರೀತಿ ಪ್ಲಾನ್ ಮಾಡಿಕೊಂಡಿತ್ತು. ಆದ್ರೆ, ಈ ಶೂ ಬಿಡುಗಡೆಗೊಳ್ಳುತ್ತಿದ್ದಂತೆ ಗ್ರಾಹಕರು ಕೆಂಡ ಕಾರಿದ್ದಾರೆ. ಅಲ್ಲದೆ ಕಂಪನಿ ಬಡವರನ್ನು ಹೀಯಾಳಿಸುತ್ತಿದೆ ಎಂದು ಟೀಕಿಸಿದ್ದಾರೆ.

ಈ ಶೂ ಬೆಲೆ ಕೇಳಿದ್ರೆ ಮೈ ಜುಂ ಎನ್ನುತ್ತದೆ. ಹೌದು….ಕಂಪನಿ ಹೊಸ ಶೂಗೆ 38 ಸಾವಿರ (530 ಯುಎಸ್ ಡಾಲರ್) ನಿಗದಿ ಮಾಡಿದೆ. ಈ ಶೂಗಳು ಸ್ನೀಕರ್ಸ್ ವೆಬ್ ಸೈಟ್ಸ್ ಹಾಗೂ ಅಮೆರಿಕದ ಮಳಿಗೆಯಲ್ಲಿ ಲಭ್ಯವಿವೆ. ಇನ್ನು ಈ ಬೂಟ್ ಮಾರುಕಟ್ಟೆಗೆ ಬರುತ್ತಿದ್ದಂತೆ, ಭರ್ಜರಿ ಮಾರಾಟವಾಗುವ ಲೆಕ್ಕಾಚಾರ ಹಾಕಿಕೊಂಡಿದ್ದ ಕಂಪನಿಗೆ ಪೆಟ್ಟು ಬಿದ್ದಿದೆ. ಸಾಮಾಜಿಕ ತಾಣದಲ್ಲಿ ಈ ಶೂಗಳ ವಿರುದ್ಧ ಗ್ರಾಹಕ ಧ್ವನಿ ಎತ್ತಿರೋದೆ, ಮಾರಾಟ ಆಗದೇ ಇರೋದಕ್ಕೆ ಕಾರಣ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...