alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಸಿದ್ಧ ಸ್ಪಾನಲ್ಲಿ 180 ಮಹಿಳೆಯರಿಗೆ ಲೈಂಗಿಕ ಶೋಷಣೆ

ಸುಸೇನ್ ಇಂಗ್ರಾಮ್ ಹೆಸರಿನ ಮಹಿಳೆ ಪ್ರಸಿದ್ಧ ಸ್ಪಾಗೆ ಹೋಗಿದ್ದಳು. ಆಕೆ ಹೋಗಿದ್ದು ಇದೇ ಮೊದಲಲ್ಲ. 6 ಬಾರಿ ಅಲ್ಲಿ ಮಸಾಜ್ ಮಾಡಿಸಿಕೊಂಡಿದ್ದ ಮಹಿಳೆಗೆ ಸ್ಪಾ ಮೇಲೆ ವಿಶ್ವಾಸ ಮೂಡಿತ್ತು. ಕಣ್ಣು ಮುಚ್ಚಿ ಮಸಾಜ್ ಮಾಡಿಸಿಕೊಳ್ತಿದ್ದವಳಿಗೆ 7ನೇ ಬಾರಿ ಶಾಕ್ ಕಾದಿತ್ತು.

ಮಸಾಜ್ ಮಾಡಲು ಬಂದ ವ್ಯಕ್ತಿ ಖಾಸಗಿ ಅಂಗ ಮುಟ್ಟಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಕಂಪನಿ ಮುಖ್ಯ ಕಚೇರಿಗೆ ಕರೆ ಮಾಡಿ ಹೇಳಿದ್ರೆ ಅವ್ರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಜೊತೆಗೆ ಬಂದ ಆರೋಪವನ್ನು ತಳ್ಳಿ ಹಾಕಿದ್ರು. ಈ ಎಲ್ಲ ಘಟನೆ ನಡೆದಿರುವುದು ಚೀನಾದಲ್ಲಿ. ಅಮೆರಿಕಾ ಮೂಲದ ಪ್ರಸಿದ್ಧ ಸ್ಪಾ Massage Envyನಲ್ಲಿ.

ಸುಸೇನ್ ಕೋರ್ಟ್ ಮೆಟ್ಟಿಲೇರಿದ್ದಾಳೆ. ಸುಸೇನ್ ಕೋರ್ಟ್ ಗೆ ಹೋಗ್ತಿದ್ದಂತೆ ಶೋಷಣೆಗೊಳಗಾದ 8 ಮಂದಿ ಮಹಿಳೆಯರು ಕೋರ್ಟ್ ಮುಂದೆ ಬಂದಿದ್ದಾರೆ. 9 ಮಹಿಳೆಯರಿಗೆ ಲೈಂಗಿಕ ಶೋಷಣೆ ನೀಡಿದ ಆರೋಪದ ಮೇಲೆ ಆರೋಪಿಗೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

Massage Envy ಸ್ಪಾ ಅಮೆರಿಕಾದಲ್ಲಿಯೇ 1200 ಕೇಂದ್ರಗಳನ್ನು ಹೊಂದಿದೆ. ವಿವಿಧ ದೇಶಗಳಲ್ಲಿ ಶಾಖೆ ಹೊಂದಿರುವ ಈ ಸ್ಪಾನಲ್ಲಿ ಈವರೆಗೂ ಸುಮಾರು 180 ಮಹಿಳೆಯರು ಶೋಷಣೆಗೊಳಗಾಗಿದ್ದಾರೆಂದು ಮಾಧ್ಯಮ ಮೂಲಗಳು ಹೇಳಿವೆ. ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರಲು ಮುಂದಾಗ್ತಿದ್ದಂತೆ ಸ್ಪಾ ಉಚಿತ ಮಸಾಜ್ ಗೆ ಆಫರ್ ನೀಡ್ತಾಯಿತ್ತು ಎನ್ನಲಾಗಿದೆ. ಕೋರ್ಟ್ ಹತ್ತಿರಕ್ಕೆ ಹೋದ ಕೆಲವರನ್ನು ಒಳಗೆ ಕಳುಹಿಸದೆ ಹೊರಗೆ ಸಂಧಾನ ಮಾಡಿ ಕಳುಹಿಸಿದೆ ಸ್ಪಾ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...