alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡಕ್ಕಿಂತ ಹೆಚ್ಚು ಮದುವೆಯಾಗದಿದ್ದರೆ ‘ಜೈಲು’…!

ಒಂದು ಮದುವೆಯಾಗಿ ಸಂಸಾರ ನಿಭಾಯಿಸುವುದೇ ಕಷ್ಟ ಎಂದು ಪರಿತಪಿಸುತ್ತಿದ್ದ ಈ ದೇಶದ ಪುರುಷರಿಗೆ ಇನ್ನೂ ಆತಂಕದ ವಿಷಯವೊಂದು ಇಲ್ಲಿದೆ ನೋಡಿ, ಒಬ್ಬರನ್ನೇ ಕಟ್ಟಿಕೊಂಡು ಹೆಣಗಾಡುತ್ತಿರುವವರು ಎರಡನೇ ಮದುವೆಯಾಗಲು ತಯಾರಾಗದಿದ್ದರೆ ಜೈಲಿಗೆ ಹೋಗಲು ಸಿದ್ಧರಾಗಬೇಕಿದೆ.

ಕನಿಷ್ಠ ಎರಡಕ್ಕಿಂತ ಹೆಚ್ಚು ಮದುವೆಯಾಗಬೇಕು ಇಲ್ಲದಿದ್ದರೆ ಜೈಲಿಗೆ ಹೋಗಬೇಕು ಎನ್ನುವ ಕಾನೂನನ್ನು ಆಫ್ರಿಕಾ ಖಂಡದ ಪುಟ್ಟದೇಶ ಇರಿಟ್ರಿಯಾದಲ್ಲಿ ಜಾರಿಗೆ ತರಲಾಗಿದೆ. ಇರಿಟ್ರಿಯಾ ಮತ್ತು ಇಥಿಯೋಪಿಯಾ ದೇಶಗಳ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಪುರುಷರು ಸಾವನ್ನಪ್ಪಿದ್ದರು. ಇದರಿಂದಾಗಿ ದೇಶದಲ್ಲಿ ಪುರುಷರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದರಿಂದ ಸರ್ಕಾರವೇ ಕನಿಷ್ಠ ಎರಡು ಮದುವೆಯಾಗಬೇಕೆಂಬ ನಿಯಮ ಜಾರಿಗೆ ತಂದಿದೆ.

ಎರಡು ಮದುವೆಯನ್ನು ಆಗಲು ರೆಡಿಯಾಗದ ಪುರುಷರು ಜೈಲು ಸೇರಬೇಕು. ತನ್ನ ಗಂಡ ಎರಡನೇ ಮದುವೆಯಾಗುವುದನ್ನು ವಿರೋಧಿಸಿದ ಹೆಣ್ಣುಮಕ್ಕಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಲಾಗಿದೆ. ಸರ್ಕಾರದ ಈ ತೀರ್ಮಾನದಿಂದ ಕೆಲವರಿಗೆ ಖುಷಿಯಾಗಿದ್ದರೆ, ಮತ್ತೆ ಕೆಲವರಿಗೆ ಬೇಸರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...