alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಕಿನಿ ಫೋಟೋ ಕಳುಹಿಸಿ ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸ್ತಿದ್ಲು ಶಿಕ್ಷಕಿ

ಕೊಲಂಬಿಯಾದಲ್ಲಿ  ಮಹಿಳಾ ಶಿಕ್ಷಕಿಯೊಬ್ಬಳು ಫೇಲ್ ಮಾಡುವ ಬೆದರಿಕೆಯೊಡ್ಡಿ ವಿದ್ಯಾರ್ಥಿಗಳ ಜೊತೆ ಶಾರೀರಿಕ ಸಂಬಂಧ ಬೆಳೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. 16-17 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ಅಶ್ಲೀಲ ದೃಶ್ಯ ಹಾಗೂ ಸಂದೇಶ ಕಳುಹಿಸುತ್ತಿದ್ದ ಶಿಕ್ಷಕಿ ಮನೆಗೆ ಬರುವಂತೆ ಹೇಳುತ್ತಿದ್ದಳು ಎನ್ನಲಾಗಿದೆ.

ವಿದ್ಯಾರ್ಥಿಯ ಪಾಲಕರೊಬ್ಬರು ಫೋನಿನಲ್ಲಿ ಸಂದೇಶ ನೋಡಿದ್ದಾರೆ. ನಂತ್ರ ಪ್ರಕರಣ ಬೆಳಕಿಗೆ ಬಂದಿದೆ. ಶಿಕ್ಷಕಿಗೆ ಕೋರ್ಟ್ 40 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದ ನಂತ್ರ ಶಿಕ್ಷಕಿಗೆ ವಿಚ್ಛೇದನ ನೀಡಲು ಪತಿ ನಿರ್ಧರಿಸಿದ್ದಾನೆ. ಘಟನೆ ನಡೆದಿರುವುದು ಮೆಡೆಲಿನ್ ಶಾಲೆಯಲ್ಲಿ. ಯೊಕೋಸ್ಟಾ ಎಮ್ ಎಂಬ ಶಿಕ್ಷಕಿ ಈ ಕೃತ್ಯವೆಸಗಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳ ಜೊತೆ ಚಾಟ್ ಮಾಡ್ತಿದ್ದ ಶಿಕ್ಷಕಿ, ವಿದ್ಯಾಭ್ಯಾಸದ ಹೆಸರಲ್ಲಿ ಅವರ ಫೋನ್ ನಂಬರ್ ಪಡೆಯುತ್ತಿದ್ದಳು ಎನ್ನಲಾಗಿದೆ. ನಂತ್ರ ಅಶ್ಲೀಲ ದೃಶ್ಯ ಹಾಗೂ ತನ್ನ ಬಿಕಿನಿ ಫೋಟೋಗಳನ್ನು ಅವರಿಗೆ ಕಳುಹಿಸುತ್ತಿದ್ದಳಂತೆ. ಕೆಲ ದಿನಗಳ ಹಿಂದಷ್ಟೇ ತನ್ನ ಫ್ಲಾಟ್ ಗೆ ಕೆಲ ಹುಡುಗರನ್ನು ಕರೆದಿದ್ದಳು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...