alex Certify
ಕನ್ನಡ ದುನಿಯಾ       Mobile App
       

Kannada Duniya

ಗೊಂಬೆ ಜೊತೆ ನಡೀತು ಆತನ ಮದುವೆ

Chinese-man-634x400

ಸಾವು ಅಂದ್ರೆ ಪ್ರತಿಯೊಬ್ಬ ವ್ಯಕ್ತಿಯೂ ಭಯಪಡ್ತಾನೆ. ಸಾಯುವುದು ಖಚಿತ ಎಂದು ಗೊತ್ತಾದ ವ್ಯಕ್ತಿಯಂತೂ ತನ್ನ ಕೊನೆ ದಿನಗಳಲ್ಲಿ ಎಲ್ಲ ಆಸೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸ್ತಾನೆ. ಮರಣದಂಡನೆ ಶಿಕ್ಷೆಯಲ್ಲೂ ಕೊರಳಿಗೆ ನೇಣು ಬೀಳುವ ಮುನ್ನ ಕೊನೆ ಇಚ್ಛೆ ಏನು ಅಂತಾ ಕೇಳ್ತಾರೆ. ಹಾಗೇ ಕ್ಯಾನ್ಸರ್ ನಿಂದ ಬಳಲ್ತಾ ಇದ್ದ ವ್ಯಕ್ತಿಯೊಬ್ಬ ತನ್ನ ಕೊನೆ ಆಸೆಯನ್ನು ಈಡೇರಿಸಿಕೊಂಡಿದ್ದಾನೆ.

ಚೀನಾದಲ್ಲಿ ವಾಸಿಸುವ 28 ವರ್ಷದ ವ್ಯಕ್ತಿಯೊಬ್ಬ ಕ್ಯಾನ್ಸರ್ ನಿಂದ ಬಳಲ್ತಾ ಇದ್ದ. ಆತನಿಗೆ ಕುವರನಾಗಿ ಸಾಯುವುದು ಇಷ್ಟವಿರಲಿಲ್ಲವಂತೆ. ಮದುವೆಯಾಗಿ ಕೊನೆಯುಸಿರೆಳೆಯುವ ಇಚ್ಛೆ ಹೊಂದಿದ್ದನಂತೆ. ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ ಕೂಡ.

ಆದ್ರೆ ಆತ ಯಾವುದೇ ಹುಡುಗಿ ಜೊತೆ ಮದುವೆಯಾಗಿಲ್ಲ. ಬದಲಾಗಿ ಸೆಕ್ಸಿ ಡಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ಸಾವು ಖಚಿತ. ನಾನು ಸತ್ತ ನಂತರ ನನ್ನ ಪತ್ನಿ ಅಳಬಾರದು ಎಂಬ ಕಾರಣಕ್ಕೆ ಗೊಂಬೆ ಜೊತೆ ಮದುವೆಯಾಗಿದ್ದಾನಂತೆ ಆತ.

ಅಲ್ಲಿನ ಪದ್ಧತಿಯಂತೆ ಗೊಂಬೆ ಜೊತೆ ಯುವಕ ಮದುವೆಯಾಗಿದ್ದಾನೆ. ಜೊತೆಗೆ ಫೋಟೋ ಶೂಟ್ ಕೂಡ ಮಾಡಿದ್ದಾನೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಆದ್ರೆ ಗೊಂಬೆ ಜೊತೆ ಮದುವೆಯಾದ ವ್ಯಕ್ತಿ ಯಾರೆಂಬುದು ಮಾತ್ರ ಸರಿಯಾಗಿ ತಿಳಿದುಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...