alex Certify
ಕನ್ನಡ ದುನಿಯಾ       Mobile App
       

Kannada Duniya

ಅವಿವಾಹಿತರನ್ನು ಕಾಡುತ್ತೆ ಈ ಖಾಯಿಲೆ

ಅವಿವಾಹಿತರನ್ನು ನೋಡಿ ವಿವಾಹಿತರು ಹೊಟ್ಟೆ ಉರಿಸಿಕೊಳ್ಳೋದು ಮಾಮೂಲಿ. ನಾನೂ ಮದುವೆಯಾಗದೇ ಆರಾಮಾಗಿ ಇರಬಹುದಿತ್ತು ಎಂದುಕೊಳ್ಳುವವರಿಗೇನು ಕಡಿಮೆ ಇಲ್ಲ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ಇನ್ಮುಂದೆ ವಿಷಾದ ಪಡೋದನ್ನು ಬಿಟ್ಟುಬಿಡಿ.

ಇತ್ತೀಚಿಗೆ ನಡೆದ ಅಧ್ಯಯನವೊಂದು ವಿವಾಹಿತರಿಗೆ ಖುಷಿ ಸುದ್ದಿಯನ್ನು ನೀಡಿದೆ. ಅವಿವಾಹಿತರಿಗಿಂತ ವಿವಾಹಿತರಲ್ಲಿ ಬುದ್ಧಿಮಾಂದ್ಯತೆ ಕಾಡೋದು ಕಡಿಮೆ ಎಂದು ಅಧ್ಯಯನ ಹೇಳಿದೆ. ನರ ವಿಜ್ಞಾನ, ನ್ಯಾರೋ ಸರ್ಜನ್, ಸೈಕಿಯಾಟ್ರಿ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಜೀವನ ಪೂರ್ತಿ ಒಂಟಿಯಾಗಿ ಜೀವನ ನಡೆಸುವವರಲ್ಲಿ ಬುದ್ಧಿಮಾಂದ್ಯತೆ ಕಾಡುವ ಸಾಧ್ಯತೆ ಶೇಕಡಾ 42ರಷ್ಟಿರುತ್ತದೆಯಂತೆ.

ಸಂಗಾತಿ ಸಾವಿನ ನಂತ್ರ ಅನೇಕ ವರ್ಷಗಳ ಕಾಲ ಏಕಾಂಗಿಯಾಗಿರುವವರಲ್ಲಿ ಕೂಡ ಬುದ್ಧಿಮಾಂದ್ಯತೆ ಶೇಕಡಾ 20ರಷ್ಟು ಕಾಡುತ್ತದೆ ಎಂದು ಅಧ್ಯಯನ ಹೇಳಿದೆ. ಲಂಡನ್ ನ ಯೂನಿವರ್ಸಿಟಿ ಕಾಲೇಜ್ ನಲ್ಲಿ ಈ ಅಧ್ಯಯನ ನಡೆಸಲಾಗಿದೆ. 15 ಬೇರೆ ಬೇರೆ ಅಧ್ಯಯನ ನಡೆಸಲಾಗಿದೆ. ಇದ್ರಲ್ಲಿ 8,00,000 ಮಂದಿ ಪಾಲ್ಗೊಂಡಿದ್ದರು.

ಮದುವೆಯಾದ ನಂತ್ರ ಸಂಗಾತಿ ಜೊತೆಗಿನ ಸಂಬಂಧ ಹಾಗೂ ಹೊಂದಾಣಿಕೆ ಬುದ್ಧಿಮಾಂದ್ಯತೆ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಜೀವನ ಶೈಲಿ ನಮ್ಮ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಸಣ್ಣ ಸಣ್ಣ ಸಂಗತಿಯನ್ನು ಮರೆಯುವುದು, ಚಿಕ್ಕ ಪುಟ್ಟ ವಿಚಾರಕ್ಕೆ ಕೋಪ, ಕೆಲಸದ ಮೇಲೆ ಏಕಾಗ್ರತೆ ಕಳೆದುಕೊಳ್ಳುವುದು, ಸದಾ ಕಿರಿಕಿರಿ ಅನುಭವ ಎಲ್ಲವೂ ಬುದ್ಧಿಮಾಂದ್ಯತೆಯ ಲಕ್ಷಣವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...