alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಫೇಸ್ಬುಕ್ ಒಡೆಯ

mark-zuckerberg-priscilla-chan-max-beast_650x400_71482319842

ಫೇಸ್ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್ ಹಾಗೂ ಪತ್ನಿ ಪ್ರಿಸ್ಕಿಲ್ಲಾ ಚಾನ್ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯದಲ್ಲೇ ತಮ್ಮ ಮನೆಗೆ ಮತ್ತೊಂದು ಹೆಣ್ಣುಮಗುವಿನ ಆಗಮನವಾಗಲಿದೆ ಅಂತಾ ಜುಕರ್ಬರ್ಗ್ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೊದಲ ಮಗು ‘ಮ್ಯಾಕ್ಸ್’ ಜನನಕ್ಕೂ ಮುನ್ನ ಸಮಸ್ಯೆ ಆಗಿದ್ರಿಂದ ಇನ್ನೊಂದು ಮಗು ಪಡೆಯಲು ಸಾಧ್ಯವಾಗುತ್ತೋ ಇಲ್ವೋ ಅನ್ನೋ ಆತಂಕವಿತ್ತು. ಪತ್ನಿ ಪ್ರಿಸ್ಕಿಲ್ಲಾ ಮತ್ತೆ ಗರ್ಭಿಣಿಯಾಗಿರೋ ವಿಷಯ ಕೇಳಿ ಸಂತಸಪಟ್ಟೆ. ಜೊತೆಗೆ ಮತ್ತೊಂದು ಹೆಣ್ಣು ಮಗುವೇ ಹುಟ್ತಾ ಇರೋದು ತಮ್ಮ ಅದೃಷ್ಟ ಅಂತಾ ಜುಕರ್ಬರ್ಗ್ ಬರೆದುಕೊಂಡಿದ್ದಾರೆ.

ಮಗುವಿನ ಆಗಮನಕ್ಕಾಗಿ ಕಾತರದಿಂದಿದ್ದು, ಇನ್ನೊಬ್ಬ ಶಕ್ತಿಯುತ ಮಹಿಳೆಯನ್ನಾಗಿ ಅವಳನ್ನು ಬೆಳೆಸುವುದಾಗಿ ಹೇಳಿದ್ದಾರೆ. ಮೊದಲ ಮಗು ಮ್ಯಾಕ್ಸ್ ಹುಟ್ಟುವುದಕ್ಕೂ ಮುನ್ನ ಜುಕರ್ಬರ್ಗ್ ಪತ್ನಿ ಪ್ರಿಸ್ಕಿಲ್ಲಾ ಅವರಿಗೆ ಮೂರು ಬಾರಿ ಗರ್ಭಪಾತವಾಗಿತ್ತು. 2015 ರ ನವೆಂಬರ್ ನಲ್ಲಿ ಮ್ಯಾಕ್ಸ್ ಜನಿಸಿದ್ದು, ಆಕೆಗೆ ಈಗ 15 ತಿಂಗಳಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...