alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಮಾಜಿ ಪತ್ನಿಗಾಗಿ ಹಾಕಿದ ಫೇಸ್ಬುಕ್ ಪೋಸ್ಟ್

fb

ವಿಚ್ಛೇದನ ಈಗ ಕಾಮನ್ ಆಗ್ಬಿಟ್ಟಿದೆ. ಡೈವೋರ್ಸ್ ಪಡೆದ ಮೇಲೆ ಸಾಮಾನ್ಯವಾಗಿ ಮಾಜಿ ಪತಿ, ಪತ್ನಿ ಸ್ನೇಹದಿಂದಿರೋದು ಅಪರೂಪ. ಒಬ್ಬರ ತಲೆ ಕಂಡ್ರೆ ಇನ್ನೊಬ್ಬರಿಗೆ ಆಗಲ್ಲ ಎನ್ನುವಂತಿರ್ತಾರೆ. ಆದ್ರೆ ಬೋಸ್ಟನ್ ನಲ್ಲೊಬ್ಬ ವಿಚ್ಛೇದನ ಪಡೆದಿರೋ ವ್ಯಕ್ತಿ, ದಂಪತಿಗಳಿಗೆಲ್ಲ ಮಾದರಿಯಾಗಿದ್ದಾನೆ.

ವಿಚ್ಛೇದನದ ಬಳಿಕ ಮಕ್ಕಳು, ಬೇರೆಬೇರೆಯಾಗಿರುವ ಹೆತ್ತವರ ಮಧ್ಯೆ ಹರಿದು ಹಂಚಿ ಹೋಗಬಾರದು ಅನ್ನೋ ಕಾರಣಕ್ಕೆ ವಿಶಿಷ್ಟವಾಗಿ ನಡೆದುಕೊಂಡಿದ್ದಾನೆ. ಮಹಿಳೆಯರನ್ನು ಯಾವ ರೀತಿ ಕಾಣಬೇಕು, ಹೇಗೆ ಗೌರವಿಸಬೇಕು ಅನ್ನೋದನ್ನು ಮಕ್ಕಳಿಗೂ ಕಲಿಸಿಕೊಡ್ತಿದ್ದಾನೆ. ಬಿಲ್ಲಿ ಫ್ಲಿನ್ ಎಂಬಾತನ ಸುಂದರ ಫೇಸ್ ಬುಕ್ ಪೋಸ್ಟ್ ಈಗ ವೈರಲ್ ಆಗಿದೆ.

ಅಮ್ಮನ ಬರ್ತಡೇ ದಿನ ತಾವೇ ಸ್ಪೆಷಲ್ ಆಗಿ ಏನಾದ್ರೂ ಮಾಡಬೇಕು ಅಂತಾ ಮಕ್ಕಳಿಗೆ ಆಸೆ. ಆಕೆ ತನ್ನ ಮಾಜಿ ಪತ್ನಿ, ಅವಳ ಸಹವಾಸವೇ ಬೇಡ ಅಂದ್ಕೊಂಡು ಬಿಲ್ಲಿ ಫ್ಲಿನ್ ಸುಮ್ಮನೆ ಕೂರುವುದಿಲ್ಲ. ಅಮ್ಮನಿಗೆ ಬೆಳಗ್ಗೆ ತಿಂಡಿ ಮಾಡಲು ಮುಂದಾಗುವ ಮಕ್ಕಳಿಗೆ ನೆರವಾಗ್ತಾನೆ. ಮಾಜಿ ಪತ್ನಿಗೆ ಕೊಡಲು ಮಕ್ಕಳಿಗೆ ಹೂವಿನ ಬೊಕೆ, ತರಹೇವಾರಿ ಉಡುಗೊರೆಗಳನ್ನು ತಂದುಕೊಡ್ತಾನೆ.

ಮದುವೆ ಮುರಿದು ಬಿದ್ದಮೇಲೆ ಇದನ್ನೆಲ್ಲಾ ಯಾಕೆ ಮಾಡ್ತೀಯಾ ಅಂತಾ ಹಲವರು ಬಿಲ್ಲಿ ಫ್ಲಿನ್ ಬಳಿ ಕೇಳಿದ್ದಾರೆ. ಇಬ್ಬರು ಗಂಡುಮಕ್ಕಳನ್ನು ಬೆಳೆಸುವ ಜವಾಬ್ಧಾರಿ ತನ್ನ ಮೇಲಿದೆ. ಈಗಿನಿಂದ್ಲೇ ತಾಯಿಯ ಬಗ್ಗೆ ಅವರು ಗೌರವ ಬೆಳೆಸಿಕೊಂಡ್ರೆ ಮುಂದೆ ಮಹಿಳೆಯರನ್ನು ಗೌರವದಿಂದ ಕಾಣುತ್ತಾರೆ ಎನ್ನುತ್ತಾನೆ ಬಿಲ್ಲಿ. ವಿಚ್ಛೇದನ ಪಡೆದ ಮೇಲೂ ಮಾಜಿ ಪತ್ನಿಯನ್ನು ವಿಶ್ವಾಸದಿಂದ ಕಾಣುತ್ತಿರುವ ಬಿಲ್ಲಿ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...