alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಿಂದ ವ್ಯಕ್ತಿಯನ್ನು ಕೆಳಕ್ಕೆ ಎಸೆದ ದುಷ್ಟರು..!

body

ಮೆಕ್ಸಿಕೋದಲ್ಲಿ ವ್ಯಕ್ತಿಯೊಬ್ಬನನ್ನು ವಿಮಾನದಿಂದ ಕೆಳಕ್ಕೆ ಎಸೆಯಲಾಗಿದೆ. ಆತನ  ಮೃತದೇಹ ಆಸ್ಪತ್ರೆಯ ಮೇಲ್ಛಾವಣಿ ಮೇಲೆ ಬಂದು ಬಿದ್ದಿದೆ. ಬೆಳಗ್ಗೆ 7.30ರ ಸಮಯದಲ್ಲಿ ವಿಮಾನವೊಂದು ತೀರಾ ಕೆಳಮಟ್ಟದಲ್ಲಿ ಹಾರಿ ಬಂದಿತ್ತು. ಆ ವಿಮಾನದೊಳಗಿಂದ ವ್ಯಕ್ತಿಯನ್ನು ಕೆಳಕ್ಕೆ ಎಸೆಯಲಾಗಿದೆ ಅಂತಾ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆದ್ರೆ ಆಸ್ಪತ್ರೆಯ ಮೇಲ್ಛಾವಣಿ ಮೇಲೆ ವ್ಯಕ್ತಿಯನ್ನು ಎಸೆದಿರುವ ಉದ್ದೇಶವೇನು? ವಿಮಾನದಿಂದ ಕೆಳಕ್ಕೆ ಎಸೆಯುವ ಸಂದರ್ಭದಲ್ಲಿ ವ್ಯಕ್ತಿ ಬದುಕಿದ್ನಾ? ಅಥವಾ ಮೃತದೇಹವನ್ನು ಕೆಳಕ್ಕೆ ಬಿಸಾಡಲಾಗಿದ್ಯಾ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

ಇದೇ ರೀತಿ ಮೆಕ್ಸಿಕೋ ನಗರದಲ್ಲಿ ಇನ್ನೂ ಎರಡು ದೇಹಗಳನ್ನು ವಿಮಾನದಿಂದ ಕೆಳಕ್ಕೆಸೆಯಲಾಗಿದೆ ಅಂತಾ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಒಂದೇ ವಿಮಾನದಿಂದ ಮೂವರನ್ನು ಕೆಳಕ್ಕೆ ಹಾಕಿರೋದು ದೃಢಪಟ್ಟಿದೆ.

ಐಎಂಎಂಎಸ್ ಆಸ್ಪತ್ರೆ ಇರುವ ಸ್ಥಳ ಕೃಷಿ ಜಾಗವಾಗಿದ್ದು, ಆಗಾಗ ವಿಮಾನಗಳು ಹಾರಾಡುತ್ತಲೇ ಇರುತ್ತವೆ. ಈ ಸ್ಥಳದಲ್ಲಿ ಡ್ರಗ್ಸ್ ದಂಧೆ ಕೂಡ ಅವ್ಯಾಹತವಾಗಿ ನಡೆಯುತ್ತಿದೆ. ಯಾವುದಾದ್ರೂ ಗ್ಯಾಂಗ್ ನ ಸದಸ್ಯರು ಈ ಕೃತ್ಯ ಎಸಗಿರಬಹುದು ಅಂತಾ ಶಂಕಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...