alex Certify
ಕನ್ನಡ ದುನಿಯಾ       Mobile App
       

Kannada Duniya

ಜನ ಮೆಚ್ಚುವಂಥ ಕೆಲಸ ಮಾಡ್ತಿದೆ ಈ ರೆಸ್ಟೋರೆಂಟ್

ಮ್ಯಾಂಚೆಸ್ಟರ್ ನ ರೆಸ್ಟೋರೆಂಟ್ ಒಂದು ಪ್ರತಿನಿತ್ಯ ರಾತ್ರಿ ಸೂರಿಲ್ಲದ ಬಡವರಿಗೆ ಆಹಾರ ವಿತರಿಸುತ್ತಿದೆ. ‘ಬೋಸು ಬಾಡಿ ಬಾರ್’ ಅನ್ನೋ ಈ ಫಾಸ್ಟ್ ಫುಡ್ ರೆಸ್ಟೋರೆಂಟ್ ಇತ್ತೀಚೆಗಷ್ಟೆ ಆರಂಭವಾಗಿದೆ. ಪ್ರತಿದಿನ ರಾತ್ರಿ ರೆಸ್ಟೋರೆಂಟ್ ಮುಚ್ಚಿದ ಬಳಿಕ ಉಚಿತವಾಗಿ ಆಹಾರ ವಿತರಿಸಲಾಗುತ್ತದೆ.

ಬಾಕ್ಸ್ ಗಳಲ್ಲಿ ಊಟ ಪ್ಯಾಕ್ ಮಾಡಿ ಇರಿಸಲಾಗುತ್ತದೆ. ಹಸಿದವರು ಇದನ್ನು ತೆಗೆದುಕೊಂಡು ತಿನ್ನಬಹುದು. 72 ಗಂಟೆಗಳವರೆಗೂ ಈ ಆಹಾರ ಕೆಡುವುದಿಲ್ಲ. ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಉಳಿದ ಆಹಾರವನ್ನೆಲ್ಲ ಚೆಲ್ಲುವುದು ವಾಡಿಕೆ. ಆದ್ರೆ ಹಾಗೆ ಮಾಡದೇ ಅದನ್ನು ಬಡವರಿಗೆ ಹಂಚಲು ಮಾಲೀಕರು ಅದನ್ನು ಪ್ಯಾಕ್ ಮಾಡಿ ಇಡಲು ಸಿಬ್ಬಂದಿಗೆ ಸೂಚನೆ ನೀಡಿದ್ದರು.

ಅದೇ ರೀತಿ ಗ್ರಾಹಕರು ಕೂಡ ಉಣ್ಣೆಯ ಬಟ್ಟೆಗಳನ್ನು ಬಡವರಿಗೆ ದಾನ ಮಾಡಬಹುದು. ರೆಸ್ಟೋರೆಂಟ್ ಬಡವರಿಗೆ ತೋರಿಸುತ್ತಿರುವ ಕಳಕಳಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಯಾಗಿದೆ. ಸಾರ್ವಜನಿಕರು ಈ ಕಾರ್ಯವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

❤️ THE BOSU PROJECT ❤️ When we close the doors for the day, we promise to leave bags outside full of tasty food.. If you…

Posted by Bosu Body Bar on Wednesday, October 18, 2017

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...