alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾಂಚೆಸ್ಟರ್ ದಾಳಿಯಲ್ಲಿ ಈತ ಮಾಡಿದ ಕೃತ್ಯ ಎಂಥದ್ದು ಗೊತ್ತಾ?

ಮ್ಯಾಂಚೆಸ್ಟರ್ ಭಯೋತ್ಪಾದಕ ದಾಳಿಯಲ್ಲಿ ಸಂತ್ರಸ್ಥನಾದ ವ್ಯಕ್ತಿಯೊಬ್ಬನಿಗೆ ಕಳ್ಳತನ ಪ್ರಕರಣದಲ್ಲಿ ಜೈಲು ಶಿಕ್ಷೆಯಾಗಿದೆ. ಈತ ದಾಳಿಯಲ್ಲಿ ಮೃತಪಟ್ಟವರ ವಸ್ತುಗಳನ್ನೇ ಕಳ್ಳತನ ಮಾಡಿದ್ದ. ಕ್ರಿಸ್ ಪಾರ್ಕರ್ ಹೀರೋ ಅಲ್ಲ ಒಬ್ಬ ಸಾಮಾನ್ಯ ಕಳ್ಳ ಅಂತಾ ಕೋರ್ಟ್ ಅಭಿಪ್ರಾಯಪಟ್ಟಿದೆ.

ಕಳೆದ ವರ್ಷ ಮೇ 22ರಂದು ಮ್ಯಾಂಚೆಸ್ಟರ್ ನಲ್ಲಿ ಬಾಂಬ್ ದಾಳಿ ನಡೆದಿತ್ತು. ಈ ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿ, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.  ಈ ವೇಳೆ ಕ್ರಿಸ್ ಪಾರ್ಕರ್ ಇಬ್ಬರ ಬಳಿಯಿಂದ ಮೊಬೈಲ್ ಮತ್ತು ಪರ್ಸ್ ಕದ್ದಿದ್ದ. ದಾಳಿಯಲ್ಲಿ ಗಾಯಗೊಂಡು ಕೊನೆಯುಸಿರೆಳೆಯುತ್ತಿದ್ದವರನ್ನೇ ದೋಚಿದ್ದ.

ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ಕ್ರಿಸ್, ತಾನು ಬಾಂಬ್ ದಾಳಿಯಲ್ಲಿ ಗಾಯಗೊಂಡಿದ್ದವರಿಗೆ ಯಾವ ರೀತಿ ಸಹಾಯ ಮಾಡಿದ್ದೇನೆ ಅನ್ನೋದನ್ನು ರಸವತ್ತಾಗಿ ಬಣ್ಣಿಸಿದ್ದ. ಎಷ್ಟೋ ಜನರು ನನ್ನ ತೊಡೆಯ ಮೇಲೆ ಕೊನೆಯುಸಿರೆಳೆದಿದ್ದಾರೆ ಅಂತೆಲ್ಲಾ ಹೇಳಿಕೊಂಡಿದ್ದ.

ಬಾಂಬ್ ದಾಳಿ ಸಂತ್ರಸ್ಥರಿಗೆ ಕ್ರಿಸ್ ನೆರವಾಗಿರೋದನ್ನು ಕೇಳಿ ಜನರು ಆತನ ಬಗ್ಗೆ ಮರುಕಪಟ್ಟಿದ್ದರು. ಮನೆಯೂ ಇಲ್ಲದೆ ನಿರ್ಗತಿಕನಾಗಿರುವ ಅವನಿಗಾಗಿ 50,000 ಪೌಂಡ್ ಹಣವನ್ನು ಸಂಗ್ರಹಿಸಲಾಗಿತ್ತು. ಆದ್ರೆ ಈತ ಕಳ್ಳ ಅನ್ನೋದು ಸಾಬೀತಾಗಿರೋದ್ರಿಂದ ಆ ಹಣ ಕೂಡ ಕ್ರಿಸ್ ಗೆ ದೊರೆಯುವುದಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...