alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಮೇಲೆ ಅತಿಯಾದ ಪ್ರೀತಿಯಿಂದ ಪತಿ ಮಾಡಿದ್ದಾನೆ ಇಂಥಾ ಕೆಲಸ

ತಲೆದಿಂಬಿನಿಂದ ಉಸಿರುಗಟ್ಟಿಸಿ ಪತ್ನಿಯ ಹತ್ಯೆ ಮಾಡಿದ ಕ್ರೂರಿಗೆ 40 ತಿಂಗಳು ಜೈಲು ಶಿಕ್ಷೆಯಾಗಿದೆ. 67 ವರ್ಷದ ಇಯಾನ್ ಗೊರ್ಡನ್ ತನ್ನ ಪತ್ನಿ 63 ವರ್ಷದ ಪೆಟ್ರೀಶಿಯಾಳನ್ನು ಹತ್ಯೆ ಮಾಡಿದ್ದ. 47 ವರ್ಷಗಳಿಂದ ಇಬ್ಬರೂ ಜೊತೆಯಾಗಿದ್ರು.

ಆಕೆ ನೋವಿನಿಂದ ಒದ್ದಾಡುತ್ತಿದ್ಲು. ಆಸ್ಪತ್ರೆ ಅಂದ್ರೆ ಅವಳಿಗೆ ಒಂದು ರೀತಿಯ ಭಯವಿತ್ತು. ಹಾಗಾಗಿ ಚೆಕಪ್ ಗೆ ಹೋಗಿರಲಿಲ್ಲ. ಅವಳು ನೋವು ತಿನ್ನೋದನ್ನು ನೋಡಿದ ಪತಿ ಇಯಾನ್, ತನ್ನ ಪತ್ನಿಗೆ ಶ್ವಾಸಕೋಶ ಕ್ಯಾನ್ಸರ್ ಇದೆ ಅಂತಾ ಭಾವಿಸಿದ್ದ.

ಪತ್ನಿಗೆ ನೋವಿನಿಂದ ಮುಕ್ತಿ ಕೊಡಿಸಲು ಅವಳನ್ನೇ ಹತ್ಯೆ ಮಾಡಿಬಿಟ್ಟಿದ್ದಾನೆ. ಹೆಂಡತಿ ಮೇಲಿದ್ದ ಅಪರಿಮಿತ ಪ್ರೀತಿಯಿಂದಾಗಿಯೇ ಇಯಾನ್ ಈ ಕೃತ್ಯ ಎಸಗಿದ್ದಾನೆ ಅಂತಾ ಆತನ ಪರ ವಕೀಲರು ವಾದಿಸಿದ್ದಾರೆ. ಅಪ್ಪ ಮಾಡಿದ ಕೃತ್ಯದಿಂದ ಮಗಳು ಕೂಡ ಆಘಾತಕ್ಕೊಳಗಾಗಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...