alex Certify
ಕನ್ನಡ ದುನಿಯಾ       Mobile App
       

Kannada Duniya

ಡೇಟಿಂಗ್‌ ಗೆಂದು ಕರೆದೊಯ್ದ ಮಹಿಳೆಯರಿಗೆ ಈತ ಮಾಡಿದ್ದೇನು ಗೊತ್ತಾ?

ಪಸಾಡೆನಾ: ಈತನೊಂದಿಗೆ ಡೇಟಿಂಗ್‌ಗಾಗಿ ಹೋದ ಮಹಿಳೆಯರಿಗೆ ಡಿನ್ನರ್‌ ಮಾಡಿದ ಬಿಲ್‌ ಮೊತ್ತವನ್ನು ತಾವೇ ಕಟ್ಟುವ ಪರಿಸ್ಥಿತಿ ಎದುರಾಗಿದೆ.

ಲಾಸ್‌ ಎಂಜಲೀಸ್‌ನ 45 ವರ್ಷದ ಪೌಲ್‌ ಗೌಡಾಲುಪೆ ಗೊಂಜಾಲ್ಸ್‌ ಡೇಟಿಂಗ್‌ ಅಪ್ಲಿಕೇಶನ್‌ ಡೈನ್‌ ಆ್ಯಂಡ್‌ ಡ್ಯಾಶ್‌ ಮೂಲಕ ಮಹಿಳೆಯರನ್ನು ಡಿನ್ನರ್‌ಗೆ ಕರೆ ತರುತ್ತಿದ್ದ. ಹೋಟೆಲ್‌ನಲ್ಲಿ ಊಟ ಮುಗಿದ ಬಳಿಕ ಬಿಲ್‌ ಕಟ್ಟದೇ ಪರಾರಿಯಾಗುತ್ತಿದ್ದ. ಈ ಸಂಬಂಧ ಮೋಸ, ಕಳ್ಳತನದ ಆರೋಪದಲ್ಲಿ ಗೋಂಜಾಲ್ಸ್‌ನನ್ನು ಗಡೀಪಾರು ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.

8 ಮಹಿಳೆಯರನ್ನು ಇದೇ ರೀತಿ ಹೋಟೆಲ್‌ಗೆ ಕರೆ ತಂದು, ಬಿಲ್‌ ಕಟ್ಟದೇ ಪರಾರಿಯಾಗಿದ್ದಾನೆ. 950 ಡಾಲರ್‌ ವಂಚಿಸಿದ್ದಾನೆ ಎಂದು ಡೆಪ್ಯುಟಿ ಡಿಸ್ಟ್ರಿಕ್ಟ್‌ ಅಟರ್ನಿ ಜನರಲ್‌ ಮೈಕೆಲ್‌ ಫೆರ್ನ್‌ ಆರೋಪಿಸಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಗೊಂಜಾಲ್ಸ್‌ ತನ್ನ ತಪ್ಪೊಪ್ಪಿಕೊಂಡಿಲ್ಲ. ಒಂದು ವೇಳೆ ಆರೋಪ ಸಾಬೀತಾದಲ್ಲಿ 13 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...