alex Certify
ಕನ್ನಡ ದುನಿಯಾ       Mobile App
       

Kannada Duniya

5 ಪೌಂಡ್ ನೋಟು 460 ಪೌಂಡ್ ಗೆ ಮಾರಾಟ..!

_91354074_punur2l9ಬ್ರಿಟನ್ನಿನ 52 ವರ್ಷದ ಎಲೆನ್ ಸ್ಕ್ರೇಸ್ ಎಂಬಾತ ತನಗೆ ಸಿಕ್ಕ 5 ಪೌಂಡ್ ನ ಪ್ಲಾಸ್ಟಿಕ್ ನೋಟನ್ನು ಹರಾಜಿಗೆ ಹಾಕಿ ಅದರಿಂದ 460 ಪೌಂಡ್ ಸಂಪಾದಿಸಿದ್ದಾನೆ.

ಬ್ರಿಟನ್ ನಲ್ಲಿ ಇದೇ ಮೊದಲ ಬಾರಿಗೆ 5 ಪೌಂಡ್ ನ ಪ್ಲಾಸ್ಟಿಕ್ ನೋಟು ಬಿಡುಗಡೆಯಾಗಿದೆ. ಈ ವಾಟರ್ ಫ್ರೂಫ್ ನೋಟು ಬಿಡುಗಡೆಯಾದ ಮಾರನೇ ದಿನವೇ ಬ್ಯಾಂಕ್ ಗೆ ತೆರಳಿದ ಎಲೆನ್ ಅವರಿಗೆ 5 ಪೌಂಡ್ ನ 3 ನೋಟುಗಳು ದೊರೆತವು. ಈ ನೋಟು AA01 ಸಿರೀಸ್ ನ ನೋಟಾಗಿತ್ತು. ಅದು ಲಕ್ಕಿ ನಂಬರ್ ಎಂದು ಯೋಚಿಸಿದ ಎಲೆನ್, ಅದನ್ನು ಈಬೇ ನಲ್ಲಿ ಹರಾಜು ಹಾಕಿದ.

ಎಲೆನ್ ಅವರ ನೋಟುಗಳನ್ನು ಪಡೆಯಲು ಸುಮಾರು 31 ಮಂದಿ ಮುಂದೆ ಬಂದಿದ್ದರು. ಅವರ ಪೈಕಿ ಒಬ್ಬರು 5 ಪೌಂಡ್ ನ ನೋಟನ್ನು 460 ಪೌಂಡ್ ಗೆ ಖರೀದಿಸಿದ್ದಾರೆ. ಬ್ರಿಟನ್ ಮೊದಲ ಬಾರಿಗೆ ಇಂತಹ ನೋಟನ್ನು ಬಿಡುಗಡೆ ಮಾಡಿರುವ ಕಾರಣ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ನೋಟಿನ ಒಂದು ಮುಖದಲ್ಲಿ ಸರ್ ವಿನ್ಸಟನ್ ಚರ್ಚಿಲ್ ಅವರ ಭಾವಚಿತ್ರ ಮತ್ತು ಇನ್ನೊಂದು ಬದಿಯಲ್ಲಿ ಬ್ರಿಟನ್ ರಾಣಿ ಯ ‘ಸೀ ಥ್ರೂ ವಿಂಡೋ’ ಭಾವಚಿತ್ರವನ್ನು ಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...