alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈನಿಂದ ಶ್ರೀದೇವಿಯವರ ಮೃತದೇಹ ತರಲು ನೆರವಾದ ವ್ಯಕ್ತಿ ಹೇಳಿದ್ದೇನು…?

ಕಳೆದ ಶನಿವಾರ ದುಬೈನ ಐಷಾರಾಮಿ ಹೋಟೆಲ್ ನಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ ಖ್ಯಾತ ಬಾಲಿವುಡ್ ನಟಿ ಶ್ರೀದೇವಿಯವರ ಅಂತ್ಯಸಂಸ್ಕಾರ ಬುಧವಾರದಂದು ಮುಂಬೈನ ವಿಲೇಪಾರ್ಲೆಯಲ್ಲಿರುವ ಚಿತಾಗಾರದಲ್ಲಿ ನೆರವೇರಿದೆ.

ಬಾಲಿವುಡ್ ಗಣ್ಯರೂ ಸೇರಿದಂತೆ ಸಹಸ್ರಾರು ಮಂದಿ ಅಭಿಮಾನಿಗಳು ಅಗಲಿದ ನಟಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಶ್ರೀದೇವಿಯವರ ಸಾವಿನ ಕುರಿತಂತೆ ಆರಂಭದಲ್ಲಿ ಹಲವಾರು ಅನುಮಾನಗಳು ಕಾಡಿದ್ದವಾದರೂ ದುಬೈ ಆಡಳಿತ ಕ್ಲೀನ್ ಚಿಟ್ ನೀಡುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದೆ.

ಈ ಮಧ್ಯೆ ಶ್ರೀದೇವಿಯವರ ಮೃತ ದೇಹವನ್ನು ಭಾರತಕ್ಕೆ ತರಲು ದುಬೈನಲ್ಲಿ ಕಾನೂನು ಪ್ರಕ್ರಿಯೆಗಳಿಗೆ ನೆರವು ನೀಡಿದ್ದ ಕೇರಳ ಮೂಲದ 44 ವರ್ಷದ ಅಶ್ರಫ್ ಶೆರ್ರಿ ಥಮರಸ್ಸೆರಿ ಅಚ್ಚರಿಯ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ತಾವು ಜೀವಮಾನದಲ್ಲೆಂದೂ ಶ್ರೀದೇವಿ ಅಭಿನಯದ ಚಿತ್ರ ವೀಕ್ಷಿಸಿಲ್ಲವೆಂದು ಹೇಳಿರುವ ಅವರು, ಯಾವುದೇ ಭಾರತೀಯ ಸೇರಿದಂತೆ ವಿದೇಶಿಯರು ಇಲ್ಲಿ ಸಾವನ್ನಪ್ಪಿದ ವೇಳೆ ಅವರಿಗೆ ನೆರವು ನೀಡುತ್ತಾ ಬಂದಿರುವುದಾಗಿ ತಿಳಿಸಿದ್ದಾರೆ.

ಈವರೆಗೆ 38 ದೇಶಗಳ ಸುಮಾರು 4,700 ಮೃತದೇಹಗಳ ರವಾನೆಗೆ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವ ಅಶ್ರಫ್ ಶೆರ್ರಿ ಥಮರಸ್ಸೆರಿ, ಮೃತ ವ್ಯಕ್ತಿ ಬಡವ, ಶ್ರೀಮಂತ, ಸೆಲೆಬ್ರಿಟಿ ಎಂಬುದನ್ನೂ ಯಾವತ್ತೂ ಗಮನಿಸಿಲ್ಲವೆಂದಿದ್ದಾರೆ. 2015 ರಲ್ಲಿ ತಮ್ಮ ಸೇವಾ ಕಾರ್ಯದ ಕಾರಣಕ್ಕೆ ‘ಪ್ರವಾಸಿ ಭಾರತೀಯ’  ಪ್ರಶಸ್ತಿ ಪಡೆದಿರುವ ಅಶ್ರಫ್ ಶೆರ್ರಿ ಥಮರಸ್ಸೆರಿ, ಸಂಬಂಧಿಗಳು ಮೃತಪಟ್ಟ ವೇಳೆ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಮೂಲಕ ಸಹಾಯ ಮಾಡಿದರೆ ಧನ್ಯತಾ ಭಾವ ಮೂಡುತ್ತದೆ. ಇದಕ್ಕೆ ತಾವು ಯಾವುದೇ ಪ್ರತಿಫಲ ನಿರೀಕ್ಷಿಸುವುದಿಲ್ಲವೆಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...