alex Certify
ಕನ್ನಡ ದುನಿಯಾ       Mobile App
       

Kannada Duniya

ಚಪ್ಪಟೆಯಾಗಿದೆಯಂತೆ ಭೂಮಿ, ಸಾಬೀತುಪಡಿಸಲು ಇಂಥಾ ಸಾಹಸ

ಮೈಕ್ ಹ್ಯೂಸ್ ಹಲವು ವರ್ಷಗಳಿಂದ ಪ್ರಯೋಗದ ಮೇಲೆ ಪ್ರಯೋಗ ಮಾಡ್ತಾನೇ ಇದ್ದಾನೆ. ಭೂಮಿ ಗುಂಡಗಿಲ್ಲ, ಚಪ್ಪಟೆಯಾಗಿದೆ ಅನ್ನೋದು ಆತನ ವಾದ. ಇದನ್ನು ಸಾಬೀತುಪಡಿಸಲು ನಿರಂತರ ಸಂಶೋಧನೆ ನಡೆಸುತ್ತಿದ್ದಾನೆ.

ಮೈಕ್ ಹ್ಯೂಸ್ ಗೆ ಈಗ 61 ವರ್ಷ. ಲೈಮೋ ಚಾಲಕನಾಗಿ ಕೆಲಸ ಮಾಡ್ತಾನೆ. ವರ್ಷಗಟ್ಟಲೆ ಕಷ್ಟಪಟ್ಟು ಆವಿ ಚಾಲಿತ ರಾಕೆಟ್ ಒಂದನ್ನು ನಿರ್ಮಾಣ ಮಾಡಿದ್ದಾನೆ. ಅವನ ಯೋಜನೆ ಈಗ ಯಶಸ್ವಿಯಾಗುವ ಹಂತ ತಲುಪಿದೆಯಂತೆ.

ಈ ಬಗ್ಗೆ ಫೇಸ್ಬುಕ್ ನಲ್ಲಿ ಮೈಕ್ ಹ್ಯೂಸ್ ಪ್ರಕಟಿಸಿದ್ದಾನೆ. ಇದೇ ಶನಿವಾರ ತಾನೇ ನಿರ್ಮಿಸಿದ ರಾಕೆಟ್ ನಲ್ಲಿ ಪ್ರಯಾಣಿಸಲು ಮೈಕ್ ಹ್ಯೂಸ್ ಸಿದ್ಧತೆ ಮಾಡಿಕೊಂಡಿದ್ದಾನಂತೆ. ವಿಜ್ಞಾನದಲ್ಲಿ ನನಗೆ ನಂಬಿಕೆಯೇ ಇಲ್ಲ ಎನ್ನುತ್ತಾನೆ ಹ್ಯೂಸ್.

ಈ ರಾಕೆಟ್ ತಯಾರಿಸಲು 20,000 ಡಾಲರ್ ಹಣ ಖರ್ಚಾಗಿದೆ. ರಿಸರ್ಚ್ ಫ್ಲಾಟ್ ಅರ್ತ್ ಅನ್ನೋ ಸಂಘಟನೆಯಿಂದ ಮೈಕ್ ಹ್ಯೂಸ್ ಗೆ ಆರ್ಥಿಕ ನೆರವು ಕೂಡ ದೊರೆತಿತ್ತು. ಸಾವು ಸಹಜ, ಅದಕ್ಕೆ ಹೆದರಿಕೊಂಡು ಸುಮ್ಮನೆ ಕೂರಲೇಬಾರದು ಅನ್ನೋದು ಆತನ ಅಭಿಪ್ರಾಯ.

ಹಾಗಾಗಿ ತನ್ನದೇ ರಾಕೆಟ್ ನಲ್ಲಿ ಹಾರಲು ಸಜ್ಜಾಗಿದ್ದಾನೆ. 2014ರಲ್ಲೂ ಹ್ಯೂಸ್ ಇಂಥದ್ದೇ ಪ್ರಯತ್ನ ನಡೆಸಿದ್ದ. ಆ ಪ್ರಯತ್ನ ವಿಫಲವಾಗಿತ್ತು. 1,374 ಅಡಿ ಮೇಲಿಂದ ಹ್ಯೂಸ್ ಕೆಳಕ್ಕೆ ಬಿದ್ದಿದ್ದ. ಈಗ ಮತ್ತದೇ ಸಾಹಸಕ್ಕೆ ಕೈಹಾಕಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...