alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ವಿಲಕ್ಷಣ ಕಳ್ಳತನ ಪ್ರಕರಣ

ಆಸ್ಟ್ರೇಲಿಯಾದ ಡಿಪಾರ್ಟ್ಮೆಂಟಲ್ ಸ್ಟೋರ್ ಒಂದರಲ್ಲಿ ನಡೆದಿರುವ ವಿಲಕ್ಷಣ ಕಳ್ಳತನ ಪ್ರಕರಣದ ವಿಡಿಯೋ ವೈರಲ್ ಆಗಿದ್ದು, ನೋಡುಗರಲ್ಲಿ ನಗೆಯುಕ್ಕಿಸುತ್ತದೆ. ಕಳ್ಳತನ ಮಾಡಲು ಸಿಂಹದ ವೇಷ ಧರಿಸಿ ಬಂದಿದ್ದಾನೆ ಈ ಭೂಪ.

ತನ್ನ ಸಹಚರನ ಜೊತೆ ಈತ ಸ್ಟೋರ್ ಒಳ ಪ್ರವೇಶಿಸಿದ್ದು, ಗುರುತು ಸಿಗಬಾರದೆಂಬ ಕಾರಣಕ್ಕೆ ಸಿಂಹದ ವೇಷ ಧರಿಸಿದ್ದಾನೆ. ಮುಖಕ್ಕೆ ಮುಖವಾಡವನ್ನೂ ಹಾಕಿಕೊಂಡಿದ್ದು, ಉಬರ್ ಹೆಸರಿರುವ ಜಾಕೆಟ್ ತೊಟ್ಟ ಸಹಚರ ಆತನ ಹಿಂದೆ ಪ್ರವೇಶಿಸಿದ್ದಾನೆ.

ಇಬ್ಬರೂ ಬೆಲೆ ಬಾಳುವ ಐಫೋನ್, ಚಾಕೋಲೆಟ್ಸ್, ಕ್ಯಾನಾನ್ ಕ್ಯಾಮೆರಾ ಸೇರಿದಂತೆ ಹಲವು ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಕಳ್ಳತನದ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಪೊಲೀಸರು, ಆರೋಪಿಗಳ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಕೋರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...