alex Certify
ಕನ್ನಡ ದುನಿಯಾ       Mobile App
       

Kannada Duniya

ಎದೆಗೆ ಚುಚ್ಚಿದ್ದ ಚಾಕು ಸಮೇತ ಆಸ್ಪತ್ರೆಗೆ ಬಂದ

ಸಾವು-ಬದುಕು ಅನ್ನೋದು ನಮ್ಮ ಕೈಯಲ್ಲಿಲ್ಲ. ಕೆಲವೊಮ್ಮೆ ಆಕಸ್ಮಿಕ ಅಪಘಾತಗಳು ಪ್ರಾಣ ತೆಗೆಯುತ್ತವೆ. ಒಮ್ಮೊಮ್ಮೆ ಅದೃಷ್ಟವೇ ನಮ್ಮನ್ನು ಬದುಕಿಸಲೂಬಹುದು. ಅದೃಷ್ಟದ ಜೊತೆ ಜೊತೆಗೆ ದೃಢ ಮನಸ್ಥಿತಿ ಇದ್ರೆ ಎಂಥ ಕಷ್ಟವನ್ನಾದ್ರೂ ಗೆದ್ದು ಬರಬಹುದು.

ಇದಕ್ಕೆ ಲೇಟೆಸ್ಟ್ ಉದಾಹರಣಗೆ ನ್ಯೂಯಾರ್ಕ್ ನಲ್ಲಿ ನಡೆದ ಘಟನೆ. 35 ವರ್ಷದ ಮೊಹಮದ್ ರಮಿರೇಜ್ ಎಂಬಾತನಿಗೆ ಯಾರೋ ಚಾಕು ಇರಿದಿದ್ರು. ಎದೆಗೆ ಚಾಕು ಚುಚ್ಚಿದ್ರೆ ಬದುಕೋದೇ ಕಷ್ಟ. ಅದರಲ್ಲೂ ತಕ್ಷಣಕ್ಕೆ ಯಾರಾದ್ರೂ ಸಹಾಯ ಮಾಡಿ ಆಸ್ಪತ್ರೆಗೆ ಸೇರಿಸಿದ್ರೆ ಬಚಾವ್ ಆಗೋ ಚಾನ್ಸ್ ಇದೆ.

ಆದ್ರೆ ಮೊಹಮ್ಮದ್ ತಾನೇ ಖುದ್ದಾಗಿ ಆಸ್ಪತ್ರೆಗೆ ನಡೆದುಕೊಂಡು ಬಂದಿದ್ದಾನೆ. ಆತನ ಎದೆಗೆ ಚಾಕು ಚುಚ್ಚಿಕೊಂಡೇ ಇತ್ತು, ರಕ್ತ ಸುರಿಯುತ್ತಿತ್ತು. ಆದ್ರೆ ತಾನು ಬದುಕಬೇಕು ಅನ್ನೋ ಛಲವೇ ಅವನನ್ನು ಕಾಪಾಡಿದೆ. ಸದ್ಯ ಶಸ್ತ್ರಚಿಕಿತ್ಸೆ ನಡೆಸಿ ಚಾಕುವನ್ನು ಎದೆಯಿಂದ ಹೊರತೆಗೆದಿದ್ದು, ಮೊಹಮ್ಮದ್ ಚೇತರಿಸಿಕೊಳ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...