alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆಯ ವಿಮಾನ ಖರೀದಿಸಿ ಕನಸಿನ ಮನೆ ಕಟ್ಟಿದ ಸಾಹಸಿ

ಸ್ವಂತಕ್ಕೊಂದು ಸುಂದರ ಮನೆ, ಒಳ್ಳೆಯ ಕೆಲಸ ಪ್ರತಿಯೊಬ್ಬರ ಕನಸು. ಜೀವನದಲ್ಲಿ ಸೆಟಲ್ ಆಗಬೇಕು ಅಂತಾನೇ ಎಲ್ರೂ ಬಯಸ್ತಾರೆ. ಆದ್ರೆ ಸ್ವಂತ ಸೂರಿನ ಕನಸು ಈಡೇರೋದು ಈ ದುಬಾರಿ ದುನಿಯಾದಲ್ಲಿ ಅಷ್ಟು ಸುಲಭವಿಲ್ಲ.

ಆದ್ರೆ ಬ್ರೂಸ್ ಕ್ಯಾಂಪ್ಬೆಲ್ ಎಂಬಾತ ತನ್ನ ಈ ಕನಸನ್ನು ವಿಶಿಷ್ಟ ರೀತಿಯಲ್ಲಿ ನನಸು ಮಾಡಿಕೊಂಡಿದ್ದಾನೆ. ವಿಮಾನದಲ್ಲಿ ಬದುಕಬೇಕು ಅನ್ನೋದು ಅವನ ಮಹದಾಸೆಯಾಗಿತ್ತು. ಹಾಗಾಗಿ 1 ಲಕ್ಷ ಡಾಲರ್ ಕೊಟ್ಟು ಖರೀದಿ ಮಾಡಿದ್ದ. ವಿಮಾನದಲ್ಲೇ ಸುಂದರ ಮನೆಯನ್ನು ನಿರ್ಮಾಣ ಮಾಡಿದ್ದಾನೆ.

ಬೋಯಿಂಗ್ 727 ವಿಮಾನದಲ್ಲಿ ತನ್ನ ಕನಸಿನ ಮನೆ ಕಟ್ಟಲು ಬ್ರೂಸ್ ಗೆ 20 ವರ್ಷಗಳೇ ಬೇಕಾಗಿವೆ. ಆದ್ರೂ ಜಪಾನ್ ನ ಈ ಸಾಹಸಿ ಪ್ರಯತ್ನ ಕೈಬಿಡಲಿಲ್ಲ. ಈ ವಿಮಾನದಲ್ಲಿ ಸ್ನಾನದ ಮನೆ, 2 ಶೌಚಾಲಯ, ಲಿವಿಂಗ್ ಏರಿಯಾ, ಅತಿಥಿಗಳಿಗೆ ಕೂರಲು ಆಸನ ವ್ಯವಸ್ಥೆ ಎಲ್ಲವೂ ಇದೆ. ಒಟ್ಟು 1066 ಚದರ ಅಡಿ ವಿಸ್ತೀರ್ಣದ ವಿಮಾನ ಅಂದದ ಮನೆಯ ರೂಪ ಪಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...