alex Certify
ಕನ್ನಡ ದುನಿಯಾ       Mobile App
       

Kannada Duniya

ಮುತ್ತಿಡಲು ಬಂದ ಬೀದಿ ಕಾಮಣ್ಣನಿಗೆ ಲೈವ್ ನಲ್ಲೇ ಗ್ರಹಚಾರ ಬಿಡಿಸಿದ ಪತ್ರಕರ್ತೆ

ಆಕೆ ಬ್ರೆಜಿಲ್ ಟಿವಿ ಗ್ಲೋಬ್ನ ಕ್ರೀಡಾ ಪತ್ರಕರ್ತೆ. ರಷ್ಯಾದಲ್ಲಿ ನಡೀತಿರೋ ಫಿಫಾ ಫುಟ್ಬಾಲ್ ನ ನೇರ ವರದಿಯನ್ನ ಮಾಡೋದಕ್ಕೆ ಬ್ರೆಜಿಲ್ ಗೆ ಬಂದಿದ್ದರು.

ಜಪಾನ್ ಮತ್ತು ಸೆನೆಗಲ್ ನಡುವಿನ ಪಂದ್ಯ ಶುರುವಾಗೋದಕ್ಕೂ ಮೊದಲು ಸುದ್ದಿವಾಹಿನಿಯ ಲೈವ್ ಕಾರ್ಯಕ್ರಮದಲ್ಲಿ ಮಾಹಿತಿಯನ್ನ ನೀಡುತ್ತಿದ್ದರು. ಆ ವೇಳೆಯಲ್ಲೇ ವ್ಯಕ್ತಿಯೊಬ್ಬ ಆಕೆಯ ಬಳಿ ಬಂದು ಅಸಭ್ಯವಾಗಿ ವರ್ತಿಸಿ ಮುತ್ತಿಡಲು ಮುಂದಾದ.

ಇದೆಲ್ಲವೂ ಲೈವ್ ಟೆಲಿಕಾಸ್ಟ್ ಆಗ್ತಾನೆ ಇತ್ತು. ತನ್ನ ವೃತ್ತಿ ಧರ್ಮವನ್ನ ಪಾಲಿಸುವ ನಡುವೆಯೂ ಆಕೆ ತನ್ನ ಮೇಲೆ ನಡೆಯಲಿದ್ದ ದೌರ್ಜನ್ಯವನ್ನು ತಡೆಯೋಕೆ ಮುಂದಾದಳು. ಹಿಂದು ಮುಂದು ನೋಡದೆ ಕಾಮುಕನನ್ನ ತರಾಟೆಗೆ ತೆಗೆದುಕೊಂಡಳು. ತನ್ನ ಮೇಲೆ ಎರಗಿ ಬರುತ್ತಿದ್ದವನನ್ನ ಮಾತಿನಲ್ಲೇ ಹಿಂದೆ ಸರಿಯುವಂತೆ ಮಾಡಿದಳು. “Don’t do this, Never do this again, I don’t allow you to do this to a woman, respect ಅಂತ ಹೇಳ್ತಿದ್ದ ಹಾಗೆ ಆ ಬೀದಿ ಕಾಮಣ್ಣ ತಣ್ಣಗಾದ. ಹಿಂದಿರುಗಿ ನೋಡದೆ ಜಾಗ ಖಾಲಿಮಾಡಿಬಿಟ್ಟ .

ಇದೆಲ್ಲವನ್ನೂ ಲೈವ್ ಟೆಲಿಕಾಸ್ಟ್ ಮಾಡಿದ ಸುದ್ದಿವಾಹಿನಿ ಪತ್ರಕರ್ತೆಯ ಪರ ನಿಂತಿದೆ. ಅಷ್ಟೇ ಅಲ್ಲ ತನ್ನ ಟ್ವಿಟ್ಟರ್ ಖಾತೆಯಲ್ಲೂ ಈ ಸುದ್ದಿಯನ್ನ ಪ್ರಸಾರ ಮಾಡಿದೆ. ಫಿಫಾ ವಿಶ್ವಕಪ್ ಆರಂಭದಲ್ಲೂ ಕ್ರೀಡಾ ಪತ್ರಕರ್ತೆ ಇಂತದ್ದೇ ಪರಿಸ್ಥಿತಿಯನ್ನ ಎದುರಿಸಿದ್ದರಂತೆ. ಪತ್ರಕರ್ತೆಯ ಧೈರ್ಯ ಮತ್ತು ಸಮಸ್ಯೆಯನ್ನ ಎದುರಿಸಿದ ರೀತಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...