alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಹೆಬ್ಬಾವಿನ ಜೊತೆಗೆ ಪ್ಲೇನ್ ಹತ್ತೋಕೆ ಹೊರಟಿದ್ದ ಭೂಪ…!

ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಾರ್ಬಡೋಸ್ಗೆ ಹೆಬ್ಬಾವಿನ ಜೊತೆ ಕದ್ದು ಮುಚ್ಚಿ ಪ್ರಯಾಣ ಹೊರಟಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವ್ಯಕ್ತಿಯೊಬ್ಬ ಕಂಪ್ಯೂಟರ್ ಹಾರ್ಡ್ ಡ್ರೈವ್ನಲ್ಲಿ ಹೆಬ್ಬಾವನ್ನ ಅಡಗಿಸಿಟ್ಟು ಪ್ರಯಾಣ ಬೆಳಸೋಕೆ ತಯಾರಿ ನಡೆಸಿದ್ದ. ಆದ್ರೆ ವಿಮಾನ ನಿಲ್ದಾಣ ಸಿಬ್ಬಂದಿ ತಪಾಸಣೆ ನಡೆಸಿದ ವೇಳೆ ವ್ಯಕ್ತಿಯ ಘನ ಕಾರ್ಯ ಬೆಳಕಿಗೆ ಬಂದಿದೆ.

ವಿಮಾನ ನಿಲ್ದಾಣದಲ್ಲಿದ್ದ ಸಿಬ್ಬಂದಿಗೆ ಬಂಧಿತ ವ್ಯಕ್ತಿಯ ವಸ್ತುಗಳನ್ನ ತಪಾಸಣೆಯ ಒಳಪಡಿಸಿದ ಸಂದರ್ಭದಲ್ಲಿ ಕುತೂಹಲಕಾರಿಯಾದಂತಾ ವಸ್ತುವೊಂದು ಕಣ್ಣಿಗೆ ಬಿದ್ದಿದೆ. ಕೂಡಲೇ ಅವರು ಕಂಪ್ಯೂಟರ್ ಹಾರ್ಡ್ ಡ್ರೈವ್ ತೆಗೆದು ತಪಾಸಣೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಆನಂತರದಲ್ಲಿ ಬಾಂಬ್ ನಿಷ್ಕ್ರಿಯ ದಳದ ಪರಿಣಿತರು ಹೆಚ್ಚಿನ ತಪಾಸಣೆ ಮಾಡಿದಾಗ ಆ ಹೆಬ್ಬಾವು ಜೀವಂತವಿರುವ ವಿಚಾರ ಗೊತ್ತಾಗಿದೆ. ಕೂಡಲೇ ಆ ವ್ಯಕ್ತಿಯನ್ನ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ. ಭದ್ರತಾ ಕಾರಣಗಳಿಗಾಗಿ ಆ ವ್ಯಕ್ತಿಯ ಗುರುತನ್ನು ಪೊಲೀಸರು ಬಹಿರಂಗಗೊಳಿಸಿಲ್ಲ.

ಅತನಿಂದ ವಶಪಡಿಸಿಕೊಂಡ ಹೆಬ್ಬಾವನ್ನು ಮೀನು ಮತ್ತು ವನ್ಯಜೀವಿ ಸಂರಕ್ಷಣಾ ವಿಭಾಗದ ಸುಪರ್ದಿಗೆ ನೀಡಲಾಗಿದೆ. ಈ ಘಟನೆಯಿಂದಾಗಿ ಕೆಲಕಾಲ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...