alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲೇ ಬೆತ್ತಲಾಗಿ ವಿಚಿತ್ರವಾಗಿ ವರ್ತಿಸಿದ ಯುವಕ

ಕ್ವಾಲಲಾಂಪುರ್: ವಿಮಾನದಲ್ಲಿಯೇ ಮೈಮರೆತ ಯುವಕನೊಬ್ಬ ಪೋರ್ನ್ ನೋಡುತ್ತಾ, ಬಟ್ಟೆಗಳನ್ನೆಲ್ಲಾ ಕಿತ್ತೆಸೆದು ಅನುಚಿತವಾಗಿ ವರ್ತಿಸಿದ್ದಾನೆ.

ಮಲೇಷ್ಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಬಾಂಗ್ಲಾದೇಶದ 20 ವರ್ಷದ ಯುವಕ ಹೀಗೆ ಅನುಚಿತವಾಗಿ ವರ್ತಿಸಿದವ. ಕ್ವಾಲಲಾಂಪುರ್ ನಿಂದ ಮಲಿಂಡೋ ಏರ್ ಫ್ಲೈಟ್ ನಿರ್ಗಮಿಸಿದ ಕೆಲವೇ ನಿಮಿಷದಲ್ಲಿ ಮೈಮೇಲಿದ್ದ ಬಟ್ಟೆಗಳನ್ನು ಕಿತ್ತೆಸೆದಿದ್ದಾನೆ.

ಲ್ಯಾಪ್ ಟಾಪ್ ನಲ್ಲಿ ಪೋರ್ನ್ ನೋಡುತ್ತಾ ಉದ್ರೇಕಗೊಂಡ ಆತ, ಮಹಿಳಾ ಸಿಬ್ಬಂದಿಗಳನ್ನು ತಬ್ಬಿಕೊಳ್ಳಲು ಮುಂದಾಗಿದ್ದಾನೆ. ಆಗ ವಿಮಾನದ ಪುರುಷ ಸಿಬ್ಬಂದಿ ಆತನನ್ನು ನಿಯಂತ್ರಿಸಲು ಪ್ರಯತ್ನಿಸಿದಾಗ, ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಸಹ ಪ್ರಯಾಣಿಕರ ಮೇಲೂ ರೇಗಾಡಿದ್ದಾನೆ.

ಕೊನೆಗೆ ಆತನನ್ನು ಬಟ್ಟೆಯಿಂದ ಕಟ್ಟಿಹಾಕಲಾಗಿದೆ. ಢಾಕಾದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಯುವಕನನ್ನು ಬಂಧಿಸಲಾಗಿದೆ. ವಿಮಾನದಲ್ಲಿ ವಿಚಿತ್ರವಾಗಿ ವರ್ತಿಸಿದ ಯುವಕನೊಬ್ಬನನ್ನು ಢಾಕಾದಲ್ಲಿ ಬಂಧಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...